ಶಂಕರಮೂರ್ತಿಗೆ ರಂಗದಾಸೋಹಿ ಪ್ರಶಸ್ತಿ
ಭದ್ರಾವತಿ: ಭದ್ರಾವತಿಯ ರಂಗನಿರ್ದೇಶಕ ಎಸ್.ಜಿ.ಶಂಕರಮೂರ್ತಿ ಅವರನ್ನು ಬೆಂಗಳೂರಿನ ರಂಗಮಂಡಲ ಸಾಂಸ್ಕೃತಿಕ ಸಂಸ್ಥೆ ಭದ್ರಾವತಿಯಲ್ಲಿ ಶನಿವಾರ ನಡೆದ ವಚನ ರಂಗೋತ್ಸವದಲ್ಲಿ ರಂಗದಾಸೋಹಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಹಿರಿಯ ಕಲಾವಿದ ಮೈಸೂರು ಕಾಗದ ಕಾರ್ಖಾನೆ ಹಣಕಾಸು ವಿಭಾಗದ ಸಹಾಯಕ ಮಹಾಪ್ರಬಂಧಕ ಲಕ್ಷ್ಮಿನಾರಾಯಣಪ್ಪ ಅವರಿಗೆ ಶಾಲು ಹೊದೆಸಿ ಸನ್ಮಾನಿಸಿದರು. ಶಂಕರಮೂರ್ತಿ ಅವರ ಧರ್ಮಪತ್ನಿ, ರಂಗಮಂಡಲ ಸಂಸ್ಥೆಯ ಅಧ್ಯಕ್ಷ ಮಲ್ಲಿಕಾರ್ಜುನಸ್ವಾಮಿ ಮಹಾಮನೆ, ನಗರಸಭಾ ಸದಸ್ಯ ಶಿವರಾಜ್, ಅಖಿಲ ಭಾರತ ವೀರಶೈವ ಮಹಾಸಭಾ ಭದ್ರಾವತಿ ತಾಲೂಕಿನ ಘಟಕದ ಅಧ್ಯಕ್ಷ ಸಿದ್ದಲಿಂಗಯ್ಯ, ಅಧ್ಯಕ್ಷತೆ ವಹಿಸಿದ್ದ ಬಿ.ಎಸ್.ಸದಾಶಿವಯ್ಯ, ಸಾಣೇಹಳ್ಳಿಯ ಶ್ರೀಮಠದ ಮಲ್ಲಯ್ಯ ಮೊದಲಾದವರು ಇದ್ದರು.
ಇಂದು ಸಾಗರದಲ್ಲಿ ಬಿಎಸ್ವೈ ಪ್ರಚಾರ
ಶಿವಮೊಗ್ಗ: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಎಸ್. ಯಡಿಯೂರಪ್ಪ ಅವರು ಮಾ. 17ರ ಸೋಮವಾರ ಸಾಗರ ವಿಧಾನಸಭಾ ಕ್ಷೇತ್ರದ ವಿವಿಧೆಡೆ ಪ್ರಚಾರ ಕೈಗೊಳ್ಳಲಿದ್ದು, ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್, ಸಂಸದ ಬಿ.ವೈ. ರಾಘವೇಂದ್ರ, ಮುಖಂಡರಾದ ಕೆ.ಪಿ. ಪುರುಷೋತ್ತಮ್, ಬಿ.ಆರ್. ಜಯಂತ್, ಟಿ.ಡಿ. ಮೇಘರಾಜ್, ಕೆ.ಪಿ. ಚೇತನರಾಜ್ ಕಣ್ಣೂರು, ಸತೀಶ್ಬಾಬು ಸೇರಿದಂತೆ ಜತೆ ಭೇಟಿ ನೀಡುವರು. ಬೆಳಗ್ಗೆ 10.30ಕ್ಕೆ ಸಾಗರದ ವಿವಿಧ ಸಮಾಜದ ಮುಖಂಡರೊಂದಿಗೆ ಸಮಾಲೋಚನಾ ಸಭೆ ನಡೆಸಲಿದ್ದಾರೆ. ಮಧ್ಯಾಹ್ನ 12ಕ್ಕೆ ಪದವಿ ಕಾಲೇಜು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದು, ಮಧ್ಯಾಹ್ನ 3ರಿಂದ ರಾತ್ರಿ 8ರವರೆಗೆ ಸಮಾಜದ ವಿವಿಧ ಸಂಘ ಸಂಸ್ಥೆಗಳು ಹಾಗೂ ವೃತ್ತಿ ಬಾಂಧವರೊಂದಿಗೆ ಸಮಾಲೋಚನಾ ಸಭೆ ನಡೆಸಿ ಮತಯಾಚನೆ ಮಾಡಲಿದ್ದಾರೆ.
ಗುಣಾರಿಗೆ ಮಾತೃ ವಿಯೋಗ
ಶಿವಮೊಗ್ಗ: ದಿ ನ್ಯೂ ಇಂಡಿಯನ್ ಎಕ್ಸೆಪ್ರೆಸ್ ಶಿವಮೊಗ್ಗ ವರದಿಗಾರ ರಾಮಚಂದ್ರ ಗುಣಾರಿ ಅವರ ತಾಯಿ ರಮಾಬಾಯಿ ಅವರು ಭಾನುವಾರ ಬೆಳಗ್ಗೆ ನಿಧನರಾದರು. ಅವರಿಗೆ 73 ವರ್ಷ ವಯಸ್ಸಾಗಿತ್ತು. ಕೆಲವು ದಿನಗಳಿಂದ ಅಸ್ವಸ್ಥರಾಗಿದ್ದ ಇವರು ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವು ಕಂಡಿದ್ದಾರೆ. ಇವರು ಪತಿ ವಸಂತ ರಾವ್ ಗುಣಾರಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಇವರ ಅಂತ್ಯಕ್ರಿಯೆಯು ನಗರದ ರೋಟರಿ ಚಿತಾಗಾರದಲ್ಲಿ ಭಾನುವಾರ ಮಧ್ಯಾಹ್ನ ನೆರವೇರಿತು.
ಶಿಕ್ಷಣದಿಂದ ಶೋಷಣೆ ತಡೆಯಲು ಸಾಧ್ಯ
ಸಾಗರ: ಇಂದಿಗೂ ಅನೇಕ ಆಚರಣೆಗಳು ಕೆಳವರ್ಗದ ಜನರ ಆರ್ಥಿಕ ಶೋಷಣೆಗೆ ಕಾರಣವಾಗಿದೆ. ಅಂದು ನಾರಾಯಣ ಗುರುಗಳು ಕೆಳವರ್ಗದ ಜನರು ಶೈಕ್ಷಣಿಕವಾಗಿ ಪ್ರಬುದ್ಧತೆ ಸಾಧಿಸುವುದರಿಂದ ಇಂತಹ ಶೋಷಣೆಯಿಂದ ಹೊರಗೆ ಬರಲು ಸಾಧ್ಯ ಎಂಬುದನ್ನು ಪ್ರತಿಪಾದಿಸಿದ್ದರು ಎಂದು ಚಿಂತಕ ಬಾಬು ಶಿವ ಪೂಜಾರಿ ಮುಂಬೈ ಹೇಳಿದರು.
ಇಲ್ಲಿನ ಸಂಜಯ ಮೆಮೋರಿಯಲ್ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಪರಸ್ಪರ ವೇದಿಕೆ ಮಹಾಮಾನವತಾವಾದಿ ನಾರಾಯಣ ಗುರುಗಳ ಕುರಿತು ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಂಗಳೂರಿನ ಲೇಖಕ ವಿ.ಗ. ನಾಯಕ್, ಆಧುನಿಕವಾಗಿ ನಾವು ಎಷ್ಟೆ ಬೆಳೆದಿದ್ದರೂ ನಮ್ಮಲ್ಲಿ ಇಂದಿಗೂ ಜಾತಿ ವ್ಯಾಮೋಹ ದೂರವಾಗಿಲ್ಲ ಎಂದರು. ಬೆಂಗಳೂರಿನ ತಾಂತ್ರಿಕ ಶಿಕ್ಷಣ ನಿರ್ದೇಶನಾಲಯದಿಂದ ಎನ್ಎಸ್ಎಸ್ ಸೇವೆಗಾಗಿ ರಾಜ್ಯಮಟ್ಟದಲ್ಲಿ ಅತ್ಯುತ್ತಮ ಕಾರ್ಯಕ್ರಮಾಧಿಕಾರಿ ಪ್ರಶಸ್ತಿಗೆ ಭಾಜನರಾದ ಸಂಜಯ ಗಾಂಧಿ ಪಾಲಿಟೆಕ್ನಿಕ್ ಕಾಲೇಜಿನ ಎನ್ಎಸ್ಎಸ್ ಅಧಿಕಾರಿ ಎಚ್. ಪ್ರಕಾಶ್ ಅವರನ್ನು ಸನ್ಮಾನಿಸಲಾಯಿತು. ಕಾಲೇಜಿನ ಪ್ರಾಚಾರ್ಯ ಸಿ.ಎ. ರಾಜಶೇಖರ್ ಇದ್ದರು.