ಅಶೋಕ್ ಮೂರ್ತಿ ಬಿಜೆಪಿ ಸೇರ್ಪಡೆ
ಶಿವಮೊಗ್ಗ: ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯರಾದ ಬೆಜ್ಜವಳ್ಳಿ ಅಶೋಕ್ ಮೂರ್ತಿ ಅವರು ಬಿಜೆಪಿ ಅಭ್ಯರ್ಥಿ ಯಡಿಯೂರಪ್ಪ ಅವರ ಸಮ್ಮುಖದಲ್ಲಿ ಶುಕ್ರವಾರ ಕೋಣಂದೂರಿನಲ್ಲಿ ಬಿಜೆಪಿಗೆ ಮರು ಸೇರ್ಪಡೆಯಾದರು.
ಇದೇ ವೇಳೆ ಬೆಜ್ಜವಳ್ಳಿ ಗ್ರಾ.ಪಂ. ಅಧ್ಯಕ್ಷ ಜಯಂತ್, ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಮಂಜುನಾಥ್, ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಜಗದೀಶ್, ಎಪಿಎಂಸಿ ಮಾಜಿ ಸದಸ್ಯ ಹೆದ್ದೂರು ರಾಮಕೃಷ್ಣ, ರೈತ ಮುಖಂಡರಾದ ವಾಸಣ್ಣಗೌಡ ಹಾಗೂ ನೂರಾರು ಬೆಂಬಲಿಗರು ಸಹ ಬಿಜೆಪಿಗೆ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಮಾಜಿ ಶಾಸಕರು, ಆರಗ ಜ್ಞಾನೇಂದ್ರ, ಹರತಾಳು ಹಾಲಪ್ಪ, ಆರ್.ಕೆ. ಸಿದ್ದರಾಮಣ್ಣ, ಸಾಲೆಕೊಪ್ಪ ರಾಮಚಂದ್ರ, ಕೆ.ಪಿ. ಪುರುಷೋತ್ತಮ, ಸಿ.ಬಿ. ಈಶ್ವರ್, ಚಕ್ಕೋಡುಬೈಲು ರಾಘವೇಂದ್ರ, ಹುಂಚದಕಟ್ಟೆ ಗ್ರಾಮ ಪಂಚಾಯ್ತಿ ಸದಸ್ಯರಾದ ಹೆಚ್.ಆರ್. ವೆಂಕಟೇಶ್, ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೆ.ಎಂ. ಮೋಹನ್ ಹಾಗೂ ಹಲವರು ಉಪಸ್ಥಿತರಿದ್ದರು.
ಮಧುಗೆ ಹಾಲಪ್ಪ ಸವಾಲ್
ಶಿವಮೊಗ್ಗ: ಮಾಜಿ ಸಚಿವ ಹರತಾಳು ಹಾಲಪ್ಪ ಅವರ ರಾಜಕೀಯ ನಿವೃತ್ತಿ ಸವಾಲಿನ ಬಗ್ಗೆ ಅವರೇ ಸ್ಪಷ್ಟೀಕರಣ ಕೊಟ್ಟಿದ್ದಾರೆ.
ಸೊರಬ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಎಸ್. ಯಡಿಯೂರಪ್ಪ ಅವರು 20 ಸಾವಿರಕ್ಕೂ ಅಧಿಕ ಮತಗಳ ಮುನ್ನಡೆ ಪಡೆಯುತ್ತಾರೆ. ಇಲ್ಲದಿದ್ದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂಬ ಹೇಳಿಕೆಯನ್ನು ನೀಡಿದ್ದೆ. ಆದರೆ ಮಧು ಬಂಗಾರಪ್ಪ ಅವರು ಜೆಡಿಎಸ್ 20 ಸಾವಿರ ಮತ ಪಡೆದರೆ (ನಾನು) ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಮಾತನ್ನು ಹೇಳಿರುವುದಾಗಿ ಪ್ರಚಾರ ಮಾಡುತ್ತಿದ್ದಾರೆ. ಇದನ್ನು ನಾನು ಖಂಡಿಸುತ್ತೇನೆ ಎಂದಿದ್ದಾರೆ. ನಾನು ಪಡೆಯುವ ಮತಗಳ ಬಗ್ಗೆ ಹೇಳಿಲ್ಲ. ಮತಗಳ ಅಂತರದ ಬಗ್ಗೆ ಹೇಳಿದ್ದೇನೆ ಎಂದಿದ್ದಾರೆ.
ಲೇಟೆಕ್ ಕಾರ್ಯಾಗಾರ
ಶಿವಮೊಗ್ಗ: ನಗರದ ಪಿಇಎಸ್ಐಟಿಎಂನ ಇಸಿಇ ವಿಭಾಗದ ಸೆಮಿನಾರ್ ಹಾಲ್ನಲ್ಲಿ ಎರಡು ದಿನದ ಲೇಟೆಕ್ಸ್ ಕಾರ್ಯಾಗಾರ ಶುಕ್ರವಾರ ಚಾಲನೆಗೊಂಡಿತು.
ಜೆಎನ್ಎನ್ಸಿಇಯ ಡಾ. ಮಂಜುನಾಥ್, ಡಾ. ರವಿ ಎಂಯಡಹಳ್ಳಿ ಅವರು ಕಾರ್ಯಾಗಾರಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಂಜುನಾಥ್, ಲೇಟೆಕ್ಸ್ ತಂತ್ರಜ್ಞಾನದ ಮಹತ್ವ ತಿಳಿಸಿದರಲ್ಲದೆ ರಾಜೆಕ್ಟ್ ರಿಪೋರ್ಟ್ಗಳನ್ನು ಸುಲಭವಾಗಿ ಅತಿ ಕಡಿಮೆ ಸಮಯದಲ್ಲಿ ಮಾಡಲು ಲೇಟೆಕ್ಸ್ ಹೆಚ್ಚು ಉಪಯೋಗಕಾರಿ ಎಂದು ಹೇಳಿದರು.