ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಏ. 3, 4ರಂದು ಸೀತಾರಾಮ ಕಲ್ಯಾಣ ಮಹೋತ್ಸವ

Srinivasa Murthy VN
Updated On : 22 Mar 2014, 10:09 am

ಕ.ಪ್ರ.ವಾರ್ತೆ ಭದ್ರಾವತಿ ಮಾ. 21
ಸೀತಾ ಕಲ್ಯಾಣೋತ್ಸವ ಸೇವಾ ಸಮಿತಿ ವತಿಯಿಂದ ಪಟ್ಟಣದಲ್ಲಿ ನೂತನವಾಗಿ ವಿನ್ಯಾಸಗೊಂಡಿರುವ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ಏ. 3 ಮತ್ತು 4ರಂದು ಸೀತಾರಾಮ ಕಲ್ಯಾಣ ಮಹೋತ್ಸವವನ್ನು ಭದ್ರಾವತಿಯ ಅಭಿವೃದ್ಧಿಗಾಗಿ ಮತ್ತು ಲೋಕ ಕಲ್ಯಾಣಕ್ಕಾಗಿ ನಡೆಸಲಾಗುತ್ತಿದೆ ಎಂದು ಸೇವಾ ಸಮಿತಿಯ ಅಧ್ಯಕ್ಷ ಡಾ. ಹರೀಶ ದೇಲಂತಬೆಟ್ಟು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ಏ.3 ಗುರುವಾರ ಬೆಲಗೂರಿನ ಅವಧೂತ ಸದ್ಗುರು ಬಿಂಧುಮಾಧವ ಸ್ವಾಮಿಗಳ ಸಾನ್ನಿಧ್ಯದಲ್ಲಿ ಶ್ರೀರಾಮ ಪಂಚಾಯತನ ಮೂರ್ತಿಗಳ ವಿಗ್ರಹಗಳನ್ನು ಭದ್ರಾವತಿಗೆ ಬರಮಾಡಿಕೊಳ್ಳಲಾಗುವುದು. ನಂತರ ತಾಲೂಕು ಕಚೇರಿ ರಸ್ತೆಯಲ್ಲಿರುವ ಆಂಜನೇಯಸ್ವಾಮಿ ದೇವಸ್ಥಾನದಿಂದ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದ ವರೆಗೆ ನಡೆಯುವ ಶೋಭಾಯಾತ್ರೆಯಲ್ಲಿ ಈ ವಿಗ್ರಹಗಳನ್ನು ತರಲಾಗುವುದು. ಅಂದು ಸಂಜೆ 7 ಗಂಟೆಗೆ ವರಪೂಜೆ ಕಾರ್ಯಕ್ರಮದ ಪ್ರಯುಕ್ತ ಶಿವಮೊಗ್ಗದ ನವಚೇತನ ನಾಟ್ಯಾಲಯದವರಿಂದ ವರಪೂಜಾ ಸಂಭ್ರಮ ನೃತ್ಯರೂಪಕವನ್ನು ಏರ್ಪಡಿಸಲಾಗಿದೆ. ಈ ಕಾರ್ಯಕ್ರಮದ ನಂತರ ಭೋಜನ ವ್ಯವಸ್ಥೆ ಮಾಡಲಾಗಿದೆ.
ಏ. 4ರ ಶುಕ್ರವಾರ ಬೆಳಗ್ಗೆ 7 ಗಂಟೆಗೆ ವೇ.ಬ್ರ. ಕೃಷ್ಣಮೂರ್ತಿ ಸೋಮಯಾಜಿ ಹಾಗೂ ವೇ. ಬ್ರ. ರಾಘವೇಂದ್ರ ಉಪಾಧ್ಯಾಯ ಅವರ ಆಚಾರ್ಯತ್ವದಲ್ಲಿ ನಾಂದಿ, ವಿಶ್ವಕ್ಸೇನ ಆರಾಧನೆ, ಗಣಪತಿ ಪೂಜೆ, ಗೋಪೂಜೆ, ಅಶ್ವಪೂಜೆ, ಗಂಗಾಪೂಜೆ, ಕಳಶ ಸ್ಥಾಪನೆ, ಶುದ್ಧಪುಣ್ಯಾಹ, ಗಣಪತಿ ಹೋಮ, ನವಗ್ರಹ ಹೋಮ ಮತ್ತು ರಾಮತಾರಕ ಹೋಮ ಇತ್ಯಾದಿ ಧಾರ್ಮಿಕ ವಿಧಿವಿಧಾನಗಳು ನಡೆಯಲಿವೆ.
ಅಂದು ಸಂಜೆ 6.30 ಗಂಟೆಗೆ ಗೋಧೂಳಿ ಮುಹೂರ್ತದಲ್ಲಿ ತಿರುಪತಿಯ ಅಷ್ಟಾಕ್ಷರಂ, ಯಜ್ಞಚಕ್ರವರ್ತಿ ದೇ.ತಿ. ಕೃಷ್ಣಮೂರ್ತಿ ಆಯಾರ್ಯತ್ವದಲ್ಲಿ ಸೀತಾರಾಮಚಂದ್ರ ಕಲ್ಯಾಣ ಮಹೋತ್ಸವ ನೆರವೇರಲಿದೆ. ನಂತರ ರಾತ್ರಿ ಭೋಜನವನ್ನು ಏರ್ಪಡಿಸಲಾಗಿದೆ ಎಂದು ಡಾ. ಹರೀಶ ದೇಲಂತಬೆಟ್ಟು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಗೌರವಾಧ್ಯಕ್ಷ ವೆಂಕಟರಮಣ ಶೇಟ್, ಉಪಾಧ್ಯಕ್ಷ ಕೆ.ಸಿ. ವೀರಭದ್ರಪ್ಪ, ಪ್ರಧಾನ ಸಂಚಾಲಕ ಪ್ರಭಾಕರ ಜೋಯ್ಸ್, ಸಂಚಾಲಕಿ ಯಶೋಧ ವೀರಭದ್ರಪ್ಪ, ಪ್ರಧಾನ ಕಾರ್ಯದರ್ಶಿ ಬಿ.ಎಚ್. ಶಿವಕುಮಾರ್, ಜಂಟಿ ಕಾರ್ಯದರ್ಶಿ ಎಚ್. ರವಿ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement