ಮಂಡಗಳಲೆ ಹುಚ್ಚಪ್ಪ ಮರಳಿ ಕಾಂಗ್ರೆಸ್‌ಗೆ
ಸಾಗರ: ಕಾಂಗ್ರೆಸ್‌ನಿಂದ ಕುಮಾರ್ ಬಂಗಾರಪ್ಪ ಅವರಿಗೆ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಬೇಸರ ಮತ್ತು ಸಿಟ್ಟು ಮಾಡಿಕೊಂಡು ಮಾ. 17ರಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಕಾರ್ಯಕ್ರಮದಲ್ಲಿ ಬಿಜೆಪಿ ಸೇರಿದ್ದೆ. ಆದರೆ ಇದು ದಿಢೀರ್ ತೆಗೆದುಕೊಂಡ ತಪ್ಪು ನಿರ್ಧಾರ ಎಂಬ ಕಾರಣದಿಂದಾಗಿ ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ಸಿಗೆ ಬಂದಿದ್ದೇನೆ ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಮಂಡಗಳಲೆ ಹುಚ್ಚಪ್ಪ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತಕ್ತ ಚುನಾವಣೆಯಲ್ಲಿ ಕುಮಾರ ಬಂಗಾರಪ್ಪನವರಿಗೆ ಕಾಂಗ್ರೆಸ್ ಟಿಕೆಟಟ್ನೀಡುತ್ತಿಲ್ಲ ಎಂಬುದು ನನಗೆ ಬೇಸರ ಉಂಟುಮಾಡಿತ್ತು. ಸಮಾಜವಾದದ ಹಿನ್ನೆಲೆಯಿದ್ದರೂ ಬಿಜೆಪಿ ಸೇರುವುದು ಅನಿವಾರ್ಯವಾಗಿತ್ತು ಎಂದು ಹೇಳಿದರು. ಬಿಜೆಪಿ ಯಾವುದೇ ಆಮಿಷ ಒಡ್ಡಿರಲಿಲ್ಲ. ಆದರೆ ಅಲ್ಲಿ ಬಿಜೆಪಿ ಮತ್ತು ಕೆಜೆಪಿಯವರ ನಡುವೆ ಗುಂಪುಗಾರಿಕೆ ಇದೆ. ಮೇಲ್ಜಾತಿಗೆ ಮಣೆ ಹಾಕಲಾಗುತ್ತದೆ. ಆದ್ದರಿಂದ ಕಾಂಗ್ರೆಸ್ಸಿಗೆ ಮರಳುವುದಲ್ಲದೆ ಪಕ್ಷದ ಅಭ್ಯರ್ಥಿ ಮಂಜುನಾಥ ಭಂಡಾರಿಯವರು ಗೆಲ್ಲಲು ಎಲ್ಲ ರೀತಿಯ ಸಹಕಾರ ನೀಡುತ್ತೇನೆ ಎಂದು ಹೇಳಿದರು. ಸೊರಬ ಬಾಕ್ ಹಿಂದುಳಿದ ವರ್ಗದ ಅಧ್ಯಕ್ಷ ಸೋಮಶೇಖರ ಸೊರಬ ಮಾತನಾಡಿ, ನಮ್ಮ ನಾಯಕ ಕುಮಾರ ಬಂಗಾರಪ್ಪ. ಅವರ ನಿರ್ಣಯವನ್ನು ಕಾಯುತ್ತಿದ್ದೇವೆ. ಅವರ ಸೂಚನೆಯಂತೆ ನಾವು ಕೆಲಸ ಮಾಡುತ್ತೇವೆ. ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಪಕ್ಷದ ಅಭ್ಯರ್ಥಿಗಳ ಆಯ್ಕೆಗೆ ಆಂತರಿಕ ಚುನಾವಣೆ ನಡೆಸಲಾಗಿದ್ದು, ಅದನ್ನು ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೂ ಅಳವಡಿಸಿದ್ದರೆ ಸೂಕ್ತವಾಗಿತ್ತು ಎಂದರು. ಪಕ್ಷದ ಪ್ರಮುಖರಾದ ಈಶ್ವರ ನಾಯ್ಕ, ದಿನೇಶ ಬರದವಳ್ಳಿ, ತಾರಾಮೂರ್ತಿ, ರಘುನಾಥ ಸೈದೂರು, ಕರುಣಾಕರ ಹಾಗೂ ತಾಪಂ ಸದಸ್ಯ ಮಹಾಬಲೇಶ್ವರ ಕುಗ್ವೆ, ಸುಮಿತ್ರಾ ಮಹಾಬಲೇಶ್ವರ ಹಾಜರಿದ್ದರು.
ನಾಳೆ ಯಕ್ಷಗಾನ ಕಾರ್ಯಕ್ರಮ
ಸಾಗರ: ಇಲ್ಲಿನ ಯಕ್ಷಶ್ರೀ ಸಂಸ್ಥೆ ಮಾ.23ರ ಭಾನುವಾರ ಸಂಜೆ 6ಗಂಟೆಗೆ ಪಟ್ಟಣದ ನೆಹರೂ ಮೈದಾನದಲ್ಲಿರುವ ಸಂತ ಜೋಸೆಫರ ರಂಗಮಂಟಪದಲ್ಲಿ ಯಕ್ಷಗಾನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಅಂದು ಸ್ಥಳೀಯ ಹಾಗೂ ಅತಿಥಿ ಕಲಾವಿದರು ವೃಷಕೇತು ವಿಜಯ ಹಾಗೂ ಪ್ರಮೀಳಾರ್ಜುನ ಎಂಬ ಆಖ್ಯಾನವನ್ನು ಪ್ರಸ್ತುತಪಡಿಸಲಿದ್ದಾರೆ. ವೃಷಕೇತು ವಿಜಯ ಹೆಚ್ಚು ಪ್ರಚಲಿತವಿಲ್ಲದ ಆಖ್ಯಾನವಾಗಿದ್ದು ಸ್ವತಂತ್ರವಾಗಿ ಪ್ರದರ್ಶಿತವಾಗಿದ್ದೂ, ಬಹಳ ಕಡಮೆ. ಈ ಆಖ್ಯಾನವನ್ನು ಸ್ವತಂತ್ರವಾಗಿ ಇದೇ ಮೊದಲ ಬಾರಿಗೆ ಪ್ರದರ್ಶಿಸಲಾಗುತ್ತಿದೆ. ಹಿಮ್ಮೇಳದಲ್ಲಿ ಸುಬ್ರಹ್ಮಣ್ಯ ಧಾರೇಶ್ವರ, ವಿದ್ವಾನ್ ಗಣಪತಿ ಭಟ್, ನಾಗಭೂಷಣ ಕೇಡಲಸರ, ಸಂಪ ಲಕ್ಷ್ಮೀನಾರಾಯಣ ಭಾಗವಹಿಸಲಿದ್ದಾರೆ. ಮುಮ್ಮೇಳದಲ್ಲಿ ತೋಟಿಮನೆ ಗಣಪತಿ, ಸದಾಶಿವ ಭಟಟ್ಯಲ್ಲಾಪುರ, ಸುಜಯೀಂದ್ರ ಹಂದೆ, ಸಂಜಯ ಬೆಳೆಯೂರು, ಸೌಮ್ಯ ಅರುಣ, ಮಧು, ನಾಗೇಂದ್ರ ಮುರೂರು, ರವೀಶ ಹೆಗಡೆ, ರಾಮಮೂರ್ತಿ, ಕಿರಣ ಪೈ, ದೇವೇಂದ್ರ ಬೆಳೆಯೂರು, ಗಣೇಶ ಹಿರೇಮನೆ ಮುಂತಾದ ಕಲಾವಿದರು ಭಾಗವಹಿಸಲಿದ್ದಾರೆ.