ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಸಂಸ್ಕೃತಿ ಉಳಿಸಲು ಮೌನ ಕ್ರಾಂತಿ ಅಗತ್ಯ

Srinivasa Murthy VN
Updated On : 22 Mar 2014, 10:08 am

ಕ.ಪ್ರ.ವಾರ್ತೆ ಸಾಗರ ಮಾ. 21
ಸಂಸ್ಕೃತಿಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ನಾವು ನಮ್ಮ ನಮ್ಮ ಮನೆಯಿಂದಲೇ ಮೌನ ಕ್ರಾಂತಿಯನ್ನು ಆರಂಭಿಸಬೇಕು ಎಂದು ವಿದ್ವಾನ್ ನಾರಾಯಣಭಟ್ ಗೋಳಗೋಡು ಹೇಳಿದರು.
 ಇಲ್ಲಿನ ರಾಷ್ಟ್ರೋತ್ಥಾನ ಬಳಗ ಗೋಳಗೋಡು ಗ್ರಾಮದಲ್ಲಿ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾರತೀಯ ಸಂಸ್ಕೃತಿಯ ವೈಶಿಷ್ಟ್ಯಗಳು ಎಂಬ ವಿಷಯ ಕುರಿತು ಅವರು ಉಪನ್ಯಾಸ ನೀಡಿ, ಪ್ರಸ್ತುತ ಸಂಸ್ಕಾರ ರೂಢಿಸುವ ಸಂಸ್ಕೃತಿಯಲ್ಲಿಯೇ ದೋಷವಿರುವುದು ದೊಡ್ಡ ತಡೆಯಾಗಿ ಪರಿಣಮಿಸಿದೆ ಎಂದು ಅಭಿಪ್ರಾಯಪಟ್ಟರು.
ಸಂಸ್ಕಾರ ಶಿಥಿಲ: ಈ ಹಿಂದೆ ಪ್ರತಿಯೊಂದು ಜಾತಿಯವರಿಗೂ ಅವರವರದೇ ಆದ ಕ್ರಮದಲ್ಲಿ ಸಂಸ್ಕಾರ ಪಾಠಗಳಿರುತ್ತಿತ್ತು. ಇತ್ತೀಚಿನ ದಿನಗಳಲ್ಲಿ ವೇದೋಕ್ತವಾದ ಸಂಸ್ಕಾರ ಹೆಂಗಸರಿಗೆ ಸಿಗುತ್ತಿಲ್ಲ. ಸಂಸ್ಕೃತಿದತ್ತ ವ್ಯಕ್ತಿಯ ಪ್ರಭಾವ ವೈಯುಕ್ತಿಕವಾಗಿರದೆ ಇಡೀ ಸಮಾಜದ ಮೇಲೆ ಪ್ರಭಾವ ತೋರುತ್ತದೆ. ಜೀವನವೇ ಬೇರೆ, ಓದಿನ ಅರಿವೇ ಬೇರೆ ಎಂಬ ನಡವಳಿಕೆ ಕಂಡುಬಂದಿರುವುದರಿಂದಲೇ ಸಂಸ್ಕಾರ ಶಿಥಿಲವಾಗುತ್ತಿದೆ ಎಂದರು.
ಸರ್ಕಾರದ ಪಠ್ಯಕ್ರಮ ಕುರಿತು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ನಾರಾಯಣಭಟ್, ಎಲ್ಲ ಹೊಸಗನ್ನಡ ಪಠ್ಯಕ್ರಮದಲ್ಲಿ ಎಲ್ಲ ಭಾಷಾ ಪುಸ್ತಕದಲ್ಲಿ ಅಂಬೇಡ್ಕರ್ ಹಾಗೂ ಗಾಂಧೀಜಿ ಕುರಿತು ಪಠ್ಯ ಸೇರಿಸಿ ಎಂಬ ಒತ್ತಡವನ್ನು ಅಧಿಕಾರಿಗಳ ವಲಯದಿಂದ ಹೇರಲಾಗುತ್ತದೆ. ಇದರಿಂದ ಕನ್ನಡ, ಇಂಗ್ಲೀಷ್, ಸಂಸ್ಕೃತ ಭಾಷೆಗಳ ಪಠ್ಯದಲ್ಲಿ, ಕೊನೆಗೆ ಸಮಾಜಶಾಸ್ತ್ರದಲ್ಲೂ ಅದದೇ ಪಠ್ಯ ಪುನರಾವರ್ತನೆಯಾಗುತ್ತದೆ ಎಂದು ಆರೋಪಿಸಿದರು.
ಅಡಕೆ ವರ್ತಕ ಚಿಪ್ಳಿ ಸಿ.ಗೋಪಾಲಕೃಷ್ಣರಾವ್ ಕಾರ್ಯಕ್ರಮ ಉದ್ಘಾಟಿಸಿದರು. ರಾಷ್ಟ್ರೋತ್ಥಾನ ಬಳಗದ ಅಧ್ಯಕ್ಷ ಎಸ್.ಆರ್.ಭಟ್ ಭಡ್ತಿ ಅಧ್ಯಕ್ಷತೆ ವಹಿಸಿದ್ದರು. ಸಂಚಾಲಕ ರಾಜೇಂದ್ರ ಸ್ವಾಗತಿಸಿದರು. ನಾರಾಯಣಮೂರ್ತಿ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಸುಕನ್ಯಾ ಜಿ.ಭಟ್ ಕಾವ್ಯವಾಚನ ನಡೆಸಿಕೊಟ್ಟರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement