ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

'ಆತ್ಮಸ್ಥೈರ್ಯ ಇದ್ದಾಗ ಜಾತಿ ಅಗತ್ಯ ಇಲ್ಲ'

Srinivasa Murthy VN
Updated On : 25 Mar 2014, 11:44 am

ದತ್ತಿ ವಿಚಾರ ಸಂಕಿರಣ ಉದ್ಘಾಟಿಸಿ ಕಸಾಪ ಅಧ್ಯಕ್ಷ ಡಾ.ವೀರಣ್ಣ
ಶಿವಮೊಗ್ಗ:  ಬುದ್ಧ, ಮಹಾವೀರ ಮತ್ತು ಬಸವಣ್ಣ ಅವರು ಸತ್ಯದ ನೆಲೆಯಲ್ಲಿ ದೇವರ ಅಸ್ತಿತ್ವ ನಂಬಿದ್ದರು. ಅವರ ಆಲೋಚನೆ ಮತ್ತು ವಿಚಾರಗಳು ಇದಕ್ಕೆ ಪೂರಕವಾಗಿದ್ದವು. ಆದರೆ, ನಾವು ಮಾತ್ರ ಮಹಾತ್ಮರ ಸತ್ಯದ ದಾರಿ, ತತ್ವ -ಸಿದ್ಧಾಂತಗಳ ಪಾಲನೆ ಮಾಡದೆ ಅವರನ್ನು ಬರೀ ದೇವರನ್ನಾಗಿ ಪೂಜೆ ಮಾಡುತ್ತಿರುವುದು ಎಷ್ಟು ಸರಿ ಎಂದು ಕರ್ನಾಟಕ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಸಿ.ವೀರಣ್ಣ ಪ್ರಶ್ನಿಸಿದ್ದಾರೆ.
ಇಲ್ಲಿನ ಡಯಟ್ ಸಭಾಂಗಣದಲ್ಲಿ ಭಾನುವಾರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಹಮ್ಮಿಕೊಂಡಿದ್ದ ಹುಣಸಘಟ್ಟ ಎಚ್.ಎಂ. ಮಲ್ಲಿಕಾರ್ಜುನಪ್ಪ ಸಮಾಜ ಸೇವಾ ಪ್ರತಿಷ್ಠಾನ ದತ್ತಿ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
12ನೇ ಶತಮಾನದಲ್ಲಿ ವಚನಕಾರರು ಜಾತಿಪದ್ಧತಿ ಹೋಗಲಾಡಿಸಿ ಎಲ್ಲರಲ್ಲೂ ಸಮಾನತೆ ತರಲು ಹೋರಾಟ ನಡೆಸಿದ್ದರು. 'ಕಾಯಕವೇ ಕೈಲಾಸ' ಎಂಬ ತತ್ವದಿಂದ ದೇವರನ್ನು ಕಾಣಬೇಕು, ಅಂತರಂಗ ಮತ್ತು ಬಹಿರಂಗ ಶುದ್ಧಿಯಿಂದ ದೇವರ ಅನುಗ್ರಹ ಪಡೆಯಬಹುದು ಎಂದು ತಿಳಿಸುವ ಮೂಲಕ ಹೊಸ ಸಂಸ್ಕೃತಿಗೆ ಮುನ್ನುಡಿ ಬರೆದರು ಎಂದರು.
ಮಹಿಳೆಯರಿಗೆ ಸಮಾನತೆ ನೀಡಬೇಕೆಂದು ಬಹಳ ಹಿಂದೆಯೇ ಹೋರಾಟ ನಡೆದಿತ್ತು. 21ನೇ ಶತಮಾನದಲ್ಲೂ ಸಹ ಮಹಿಳೆಯರಿಗೆ ಸಮಾಜದಲ್ಲಿ ಸಂಪೂರ್ಣ ಸಮಾನತೆ ದೊರೆತಿರಲಿಲ್ಲ. ಹಾಗೆಯೇ ಈಗ ಕೂಡ ಸಂಸತ್‌ನಲ್ಲಿ ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ನೀಡಲು ಯಾವುದೇ ರಾಜಕೀಯ ಪಕ್ಷ ಸಿದ್ಧವಿಲ್ಲ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಸವ ಕೇಂದ್ರದ ಬಸವಮರುಳಸಿದ್ಧ ಸ್ವಾಮೀಜಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಗೊ.ರು. ಚನ್ನಬಸಪ್ಪ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಕೆ.ಎಸ್.ಈಶ್ವರಪ್ಪ, ಡಾ. ಸಿ.ಎಚ್. ಯತೀಶ್ವರ್, ಎಚ್.ಎಂ. ಮಲ್ಲಪ್ಪ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement