ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಜ್ಯೋತಿಷ್ಯ ಹೊರತಾದ ಧರ್ಮವಿಲ್ಲ

Srinivasa Murthy VN
Updated On : 25 Mar 2014, 11:44 am

ಹೊಂಬುಜಮಠದ ಸಿದ್ಧಾಂತಕೀರ್ತಿ ಪ್ರಶಸ್ತಿ ಸ್ವೀಕರಿಸಿ ಜ್ಯೋತಿಷಿ ಎಸ್.ಕೆ. ಜೈನ್
ಹೊಸನಗರ:  ಖ್ಯಾತ ಜ್ಯೋತಿಷಿ ಬೆಂಗಳೂರಿನ ಎಸ್.ಕೆ. ಜೈನ್ ಅವರಿಗೆ ಇತಿಹಾಸ ಪ್ರಸಿದ್ಧ ಹೊಂಬುಜ ಜೈನಮಠದಿಂದ ಕೊಡಮಾಡುವ ಪ್ರತಿಷ್ಠಿತ ಸಿದ್ಧಾಂತಕೀರ್ತಿ ಪುರಸ್ಕಾರವನ್ನು ಶ್ರೀಮಠದ ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿಗಳು ಪ್ರದಾನ ಮಾಡಿದರು.
ತಾಲೂಕಿನ ಅತಿಶಯ ಕ್ಷೇತ್ರ ಹೊಂಬುಜ ಮಠದಲ್ಲಿ ನಡೆಯುತ್ತಿರುವ ಪಾರ್ಶ್ವನಾಥ ಸ್ವಾಮಿ ಮತ್ತು ಪದ್ಮಾವತಿ ದೇವಿಯವರ ವಾರ್ಷಿಕ ರಥೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಎಸ್.ಕೆ. ಜೈನ್‌ರನ್ನು ಪುರಸ್ಕರಿಸಿದ ಶ್ರೀಗಳು, ಜ್ಯೋತಿಷ್ಯ ಶಾಸ್ತ್ರದ ಮೂಲಕ ಧಾರ್ಮಿಕ ಜಾಗೃತಿ ಮಾಡಿಕೊಂಡು ಬಂದಿರುವ ಎಸ್.ಕೆ. ಜೈನ್ ಸೇವಾತತ್ಪರತೆಯನ್ನು ಶ್ಲಾಘಿಸಿದರು.
ಪ್ರಶಸ್ತಿಗೆ ಗೌರವ: ಕೆಲವೊಮ್ಮೆ ಪ್ರಶಸ್ತಿಯಿಂದ ವ್ಯಕ್ತಿಗೆ ಗೌರವ ಬರುತ್ತದೆ. ಇನ್ನು ಕೆಲವೊಮ್ಮೆ ಪ್ರಶಸ್ತಿ ಸ್ವೀಕರಿಸುವ ವ್ಯಕ್ತಿಗಳಿಂದ ಪ್ರಶಸ್ತಿಗೆ ಗೌರವ ಸಲ್ಲುತ್ತದೆ. ಎಸ್.ಕೆ.ಜೈನ್ ಎರಡನೇ ಸಾಲಲ್ಲಿ ನಿಲುಕುವವರು. ಅವರ ಜ್ಯೋತಿಷ್ಯ ಶಾಸ್ತ್ರದ ಸೇವೆ ನಿರಂತರವಾಗಿರಲಿ ಎಂದು ಆಶಿಸಿದರು.
ಇಂದು ಯಾವ ಧರ್ಮವೂ ಜ್ಯೋತಿಷ್ಯಶಾಸ್ತ್ರದಿಂದ ಹೊರತಾಗಿಲ್ಲ. ಅದರಲ್ಲಿ ಜೈನಧರ್ಮ ಕೂಡ ಒಳಪಡುತ್ತದೆ. ಅಂಕಿ ಅಂಶದ ಮೂಲಕ ನಿಖರವಾಗಿ ಮೂಡಿಬರುವ ಜ್ಯೋತಿಷ್ಯ ಶಾಸ್ತ್ರದ ಅಗತ್ಯತೆ ಖಂಡಿತಾ ಇದೆ. ಎಂದರು. ಜೈನ ತೀರ್ಥಂಕರರ ಪೂಜೆ ಮಾಡುವುದರಿಂದ ಎಲ್ಲಾ ದೋಷಗಳು ಪರಿಹಾರವಾಗುತ್ತದೆ. ಅದೇ ರೀತಿ ಯಕ್ಷ ಯಕ್ಷಿ ಆರಾಧನೆ ಕೂಡ ಮುಖ್ಯ ಎಂದರು.
ಪುಸ್ತಕ ಬಿಡುಗಡೆ: ಸಾಹಿತಿ ಜೋಡಟ್ಟಿ ರಚಿಸಿದ ಪದ್ಮಾವತಿ ದೇವಿಯವರ ಪೂಜಾ ವಿಧಾನದ ಪುಸ್ತಕವನ್ನು ದೇವೇಂದ್ರ ಕೀರ್ತಿ ಸ್ವಾಮೀಜಿಗಳು ಬಿಡುಗಡೆ ಮಾಡಿದರು. ಹೊಂಬುಜ ುಠದ ಪುಷ್ಪರಥ ನಿರ್ಮಿಸಿದ ಶಿಲ್ಪಿ ಪದ್ಮನಾಭ ಆಚಾರ್ಯ, ಸಾಹಿತಿ ಜೋಡಟ್ಟಿ ಮಠದ ಪ್ರಮುಖರು ಉಪಸ್ಥಿತರಿದ್ದರು. ಶ್ರೀಮಠದ ಆಡಳಿತಾಧಿಕಾರಿ ಬಿ.ಜೆ. ಪದ್ಮನಾಭಯ್ಯ ಸ್ವಾಗತಿಸಿದರು. ಶ್ರೀಧರ್ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement