ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಸೀರೆಯುಟ್ಟವಳು ನೀರೆಯಾದರೆ, ಚೂಡಿ ಧರಿಸಿದವಳು?

Srinivasa Murthy VN
Updated On : 2 Aug 2013, 10:05 am

ಫ್ಯಾಷನ್ ಡಿಸೈನರ್ ಮಧು, 9945737427
ಗುಂಡು ಹಾಕಿದವರು ಎಷ್ಟೇ ಟೈಟ್ ಆಗಿದ್ರೂ ತಮ್ಮ ಮನೆಯ ಬಾಗಿಲನ್ನೇ ತಟ್ಟುತ್ತಾರಲ್ಲಾ?
ಬೇರೆಯವರ ಮನೆಯ ಬಾಗಿಲು ತಟ್ಟಿದರೆ ಬುರುಡೆಗೆ ತಟ್ಟುತ್ತಾರೆ ಅಂತ ಅವರಿಗೆ ಗೊತ್ತು.

ಪೇಂಟರ್ ಪಾಪು, ಸಂತೇಮರಹಳ್ಳಿ, 9008877712
ನಮ್ಮ ಸರ್ಕಾರ ತೊಟ್ಟಿಲನ್ನು ತೂಗುತ್ತಿದೆ ಮತ್ತು ಮಗುವನ್ನೂ ಚಿವುಟುತ್ತಿದೆ ಯಾಕೆ?
ಮಗುವಿಗೆ ತೊಟ್ಟಿಲು ತೂಗುತ್ತಿರುವವರು ಯಾರು ಅಂತ ಗೊತ್ತಾಗಬೇಕಲ್ಲ ಅದಕ್ಕೆ!

ಹರಳಹಳ್ಳಿಪುಟ್ಟರಾಜು, ಪಾಂಡವಪುರ, 9632838088
ಹೆಣ್ಣಿನ ಮೌನದಲ್ಲಿ ಉತ್ತರವೇ ಸಿಗದ ಪ್ರಶ್ನೆಗಳೆಷ್ಟಿರುತ್ತವೆ?
ಮಾತನಾಡಿದರೆ ನಿಮಗೆ ಉತ್ತರವೇ ಸಿಗದಂತಾಗುತ್ತದೆ ಹುಷಾರ್!

ವಿ. ಹೇಮಂತಕುಮಾರ, ಬೆಂಗಳೂರು, 9035992900
ಅವಳನ್ನು ಕಂಡಾಗಿನಿಂದ  ನನ್ನೆದೆಯ ವೀಣೆ ತಂನಂ ತಂನಂ ಎಂದು ಮಿಡಿಯುತ್ತಿದೆಯಲ್ಲ?
ಹುಡುಗರ ವೀಣೆಯೇ ಹಾಗೆ ಕಂಡ ಕೂಡಲೇ ಮಿಡಿಯುಲು ಶುರುವಾಗುತ್ತೆ. ಪ್ರೊಡಕ್ಷನ್ ಮಿಸ್ಟೇಕ್!

ಎಂ. ರಣಧೀರ, ತೀರ್ಥಹಳ್ಳಿ, 9663859853
ಸೀರೆಯುಟ್ಟವಳು ನೀರೆಯಾದರೆ, ಚೂಡಿ ಧರಿಸಿದವಳು?
ಚೂಟಿ.

-ಬಾಣಭಟ್ಟ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement