ಹರ ಮುನಿದರೂ ಗುರು ಕಾಯುವನಂತೆ, ಮಡದಿ ಮುನಿದರೆ?
ಆರೀಫ್, ದಾವಣಗೆರೆ, 9964280609
ಮಾಸ ಪತ್ರಿಕೆಗಳನ್ನು ಹೆಚ್ಚಾಗಿ ಹೆಣ್ಣಿನ ನಾಮದ ಮೂಲಕವೇ ಪ್ರಕಟಿಸುತ್ತಾರಲ್ಲ?
ಸರಿಯಾಗಿ ಗಮನಿಸು. ನಾಮವಷ್ಟೇ ಅಲ್ಲ, ಮುಖಪುಟದಲ್ಲಿ ಹರಡಿಕೊಂಡಿರುವ ಭಾವಗಳೂ ಅವಳದ್ದೇ!
ಕಲಾವಿದ ಸೀನು, 9538641164
ಪ್ರೀತಿಸಿ ಮದುವೆಯಾದ ಸಂಬಂಧಗಳೂ ಮುರಿದುಬೀಳುತ್ತವೆಯಲ್ಲ?
ಪ್ರೀತಿ ಮತ್ತು ಮದುವೆ ಬೇರೆ ಬೇರೆ ಸಂಗತಿಗಳು ಎಂದು ಅರ್ಥಮಾಡಿಕೊಳ್ಳದೇ ಅವಸರಿಸಿದ್ದರ ಪರಿಣಾಮ!
ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ
ಹರ ಮುನಿದರೂ ಗುರು ಕಾಯುವನಂತೆ, ಮಡದಿ ಮುನಿದರೆ?
'ಕಾಯಿಸಿಕೊಳ್ಳುವ' ಸರದಿ ಗಂಡನದ್ದೆ!
ವಿಧಾತ್ರಿ, ಬೆಂಗಳೂರು
ವಕ್ರತುಂಡೋಕ್ತಿಯ ಹೆಂಗಸರ ವರ್ಷನ್ ಹೇಗಿರಬಹುದು?
ಅವರ ವಿಷಯದಲ್ಲಿ ವಕ್ರವೇನೋ ಸರಿ, ಆದರೆ ತುಂಡಾಗಿ ಹೇಳುವ ಜಾಯಮಾನ ಅವರದ್ದಲ್ಲ.
ರವಿಕುಮಾರ್ ಜಿ.ಬಿ. 9449669897
ಮನುಷ್ಯನಿಗೆ ಬೇಡವಾದದ್ದು ಯಾವುದು?
ಈ ಪ್ರಶ್ನೆಯ ಸಹವಾಸವೇ ಬೇಡ!
-ಬಾಣಭಟ್ಟ