ಮೂರ್ಖ ಪ್ರಶ್ನೆಗಳಿಗೆ ಕೋಲ್ಯನ ಉತ್ತರ
ಮೂರ್ಖ ಪ್ರಶ್ನೆಗಳಿಗೆ ಕೋಲ್ಯನ ಉತ್ತರ
1) ಚಿತ್ರಮಂದಿರದಲ್ಲಿ
ಪ್ರ: ಇಲ್ಲೇನು ಮಾಡ್ತಾ ಇದೀಯ?
ಕೋಲ್ಯ: ಬ್ಲ್ಯಾಕ್ ಟಿಕೆಟ್ ಮಾರೋದಕ್ಕೆ ಬಂದಿದೀನಿ!
2) ಬಸ್ಸಿನಲ್ಲಿ
ಕೋಲ್ಯನ ಕಾಲು ತುಳಿದ ಧಡೂತಿ ಹೆಂಗಸು: ಕ್ಷಮಿಸಿ ನೋವಾಯಿತಾ?
ಕೋಲ್ಯ: ಇಲ್ಲಾ ಆಂಟಿ ತುಂಬಾ ಮಜಾ ಬಂತು...ಎಲ್ಲಿ ಇನ್ನೊಂದು ಸರ್ತಿ ತುಳೀರಿ!
3) ಫೋನ್
ರಾತ್ರಿ 3 ಗಂಟೆಗೆ ಫೋನ್ ಮಾಡಿದ ಗೆಳೆಯ ಕೇಳಿದ: ಮಲ್ಕೊಂಡಿದೀಯಾ?
ಕೋಲ್ಯ: ಇಲ್ಲ ಗುರು ಸಾಯೋ ಪ್ರಾಕ್ಟೀಸ್ ಮಾಡ್ತಾ ಇದ್ದೆ. ನೀನು?
4) ಕಟಿಂಗ್ ಶಾಪ್
ಸಲೂನ್ನಿಂದ ಹೊರಬಂದ ಕೋಲ್ಯನನ್ನು ಗೆಳೆಯ ಕೇಳಿದ: ಕಟಿಂಗ್ ಮಾಡಿಸ್ಕೊಂಡ್ಯಾ?
ಕೋಲ್ಯ: ಇಲ್ಲ ಗುರು, ರಾತ್ರಿ ಮಲಗಿದ್ದಾಗ ಕೂದಲೆಲ್ಲ ಒಂದಿಂಚು ಒಳಗೆ ಹೋಗ್ಬಿಟ್ಟಿವೆ, ಹೊರಗೆ ತರ್ಸೋಣ ಅಂತ ಬಂದಿದ್ದೆ!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.