ಸಾವಿನೂರಿನ ವಿಳಾಸ ಯಾರಿಗೆ ಗೊತ್ತು ಭಟ್ರೇ?
ಸಂತೆಬೆನ್ನೂರು ಫೈಜ್ನಟ್ರಾಜ್
ಸಾವಿನೂರಿನ ವಿಳಾಸ ಯಾರಿಗೆ ಗೊತ್ತು ಭಟ್ರೇ?
ವಿಳಾಸ ಕೇಳ್ಕೊಂಡ್ ಬರ್ತೀನಿ ಅಂತ ಹೋದೋವ್ರು ಒಬ್ರೂ ವಾಪಸ್ ಬಂದಿಲ್ಲ!
ರವಿಕುಮಾರ ಜಿ.ಬಿ. 9449669897
ರಾಜಕಾರಣಿಯಾಗಲು ಕನಿಷ್ಠ ಅರ್ಹತೆ ಏನು?
ಜನರು ಗರಿಷ್ಠವಾಗಿ ನಿರೀಕ್ಷಿಸುವ ಅಂಶಗಳೆಲ್ಲೆಲ್ಲವಲ್ಲೂಕನಿಷ್ಠವಾಗಿರಬೇಕು!
ವಿ. ಹೇಮಂತಕುಮಾರ, ಬೆಂಗಳೂರು, 9035992900
ಕೆಲವರು ಮರಗಳ ಮೇಲೆ ತಾವು ಪ್ರೀತಿಸುತ್ತಿರುವವರ ಹೆಸರನ್ನು ಬರೆಯುತ್ತಾರೆ ಏಕೆ?
ಅವರ ಹೆಸರು ಅಜರಾ'ಮರ'ವಾಗಿರಲಿ ಅಂತ!
ಓಂಚನ್ನೇಶ್ ಅರಬಿಳಚಿಕ್ಯಾಂಪ್, ಭದ್ರಾವತಿ, 9900739725
ಹಗಲು ಕಂಡ ಬಾವಿಗೆ ರಾತ್ರಿ ಬೀಳ್ತಾರಲ್ಲ ಯಾಕೆ?
ರಾತ್ರಿ ಬೀಳಲೆಂದೇ ಹಗಲು ಬಾವಿ ಹುಡುಕಿಕೊಳ್ಳೋರಿದ್ದಾರೆ!
ಸಿ. ನಾಗರಾಜ ಅರದೋಟ್ಲು, ಭದ್ರಾವತಿ
ಸುಖದ ಒಂದು ಬಾಗಿಲು ಮುಚ್ಚಿದರೆ ಇನ್ನೊಂದು ಬಾಗಿಲು ತೆರೆದಿರುತ್ತದೆ ಎಂಬುದನ್ನು ಮರೆತು ಮುಚ್ಚಿದ ಬಾಗಿಲನ್ನೇ ತಟ್ಟುತ್ತಿರುತ್ತೇವೆ ಏಕೆ?
ನಮಗೆ ಮುಚ್ಚಿಟ್ಟಿದ್ದರ ಬಗ್ಗೆಯೇ ಹೆಚ್ಚು ಆಸಕ್ತಿ.
ಬಾಣಭಟ್ಟ