ಪಾವರ್ಟಿಗೂ, ಪ್ರಾಪರ್ಟಿಗೂ ಇರುವ ಭಿನ್ನತೆ ಏನು?
ರವಿಕುಮಾರ ಜಿ.ಬಿ. 9449669897
ಫ್ಯಾಷನ್ ಡಿಸೈನರ್ ಮಧು ಹುಡುಗಿಯರ ಬಗ್ಗೆಯೇ ಪ್ರಶ್ನೆ ಕೇಳುತ್ತಾರೆ?
ಹೆಚ್ಚು ಫ್ಯಾಷನ್ ಮಾಡೋರು ಅವರೇ ಅಲ್ವಾ ಅದಕ್ಕೆ.
ನೇರಲಗುಡ್ಡ ಶಿವಕುಮಾರ್, ಶಿರಾ 9480343742
ಪಾವರ್ಟಿಗೂ, ಪ್ರಾಪರ್ಟಿಗೂ ಇರುವ ಭಿನ್ನತೆ ಏನು?
ರಾಬರ್ಟ್ ವಾದ್ರಾನ ಕೇಳಿ ಹೇಳ್ತೀನಿ, ಇರಿ!
ವಿರೇಶ್ ಎಚ್. ಎನ್. 9379327067
ಬೆಳಗ್ಗೆ ಮುಖವನ್ನೂ ತೊಳೆಯದೆ ಬಟ್ಟೆ ಹರಿದುಕೊಂಡು ಓದುತ್ತಿದ್ದಾನೆ ಇಲ್ಲೊಬ್ಬ. ಈತ ಮುಂದೇನಾಗಬಹುದು?
ಆತ ಮುಂದೇನಾಗುತ್ತಾನೋ. ಆದರೆ ಅವನ ಕೈಗೆ ಸಿಕ್ಕಿದವರ ಕತೆ ಮುಂದೇನಾಗಬಹುದು ಎಂಬುದೇ ಕುತೂಹಲ!
ಸರಸ್ವತಿ ರಮೇಶ್, ಹನುಮನಾಳು
ಮೋಡ ಕವಿದರೆ ಮಳೆ, ಹುಡುಗಿ ಮುನಿದರೆ?
ಪ್ರವಾಹ!
ಜಗದೀಶ ಎಸ್. ಬೆಳಗಾವಿ, 8722444410
ಮಂಗನಿಂದ ಮಾನವ ಎನ್ನುವುದು ಸತ್ಯವಾದರೆ ಈಗಿನ ಮಂಗಗಳೇಕೆ ಮನುಷ್ಯರಾಗುತ್ತಿಲ್ಲ?
ಮಂಗನಾಗಿರುವುದರಲ್ಲೇ ಹೆಚ್ಚಿನ ಘನತೆ
ಇದೆ ಎಂದು ನಿರ್ಧರಿಸಿದಂತಿದೆ!
-ಬಾಣಭಟ್ಟ