ಕಣ್ಣಿಗೆ ಬಟ್ಟೆ ಕಟ್ತೀನಿ, ಚುಂಬಿಸು ನೋಡೋಣ ಅಂತಾಳಲ್ಲ?
ಮೊಳಕಾಲ್ಮೂರು ಸುರೇಶ, ಬಳ್ಳಾರಿ
ಮಾನವನಿಗೆ ಎರಡು ಕಣ್ಣು, ಎರಡು ಕೈಗಳು, ಎರಡು ಕಾಲು, ಎರಡು ಕಿವಿ. ಆದರೆ ಬಾಯಿ ಮಾತ್ರ ಒಂದೇ ಯಾಕೆ?
ಇರೋ ಒಂದು ಬಾಯಿ ಮಾಡುವ ಅನಾಹುತಗಳೇ ಸಾಕಷ್ಟಿವೆ!
ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ
ಸಿನಿಮಾ ನೋಡಲು ಹೋದಪ್ರೇಮಿಗಳೇಕೆ ಕಾರ್ನರ್ ಸೀಟಿನಲ್ಲೇ ಕೂರ್ತಾರೆ?
ಬೇರೆಯವರು ಅವರನ್ನು ಮೂಲೆಗುಂಪು ಮಾಡಬಾರದು ಅಂತ!
ಫ್ಯಾಷನ್ ಡಿಸೈನರ್ ಮಧು, 9945737427
ಕಣ್ಣಿಗೆ ಬಟ್ಟೆ ಕಟ್ತೀನಿ, ಚುಂಬಿಸು ನೋಡೋಣ ಅಂತಾಳಲ್ಲ?
ಹಂಗಾದ್ರೂ ನೀನು ಮುತ್ತು ಕೊಡ್ತಿಯೇನೋ ಅಂತ ಆಸೆ!
ಓಂಚನ್ನೇಶ್ ಅರಬಿಳಚಿಕ್ಯಾಂಪ್, ಭದ್ರಾವತಿ, 9901257131
ಹುಡುಗಿಯರಿಗೆ ಪ್ರಪೋಸ್ ಮಾಡಲು ಮುಖ್ಯವಾಗಿ ಹುಡುಗರಲ್ಲಿ ಏನಿರಬೇಕು?
ಅಕಸ್ಮಾತ್ ಆಕೆ ಒಪ್ಪಿಬಿಟ್ಟರೆ ಆಕೆಯ ಜತೆ ಜೀವನವಿಡೀ ಕಳೆಯುವ ಧೈರ್ಯ ಇರಬೇಕು!
ಆರೀಫ್ (ಅಪ್ಪು), ದಾವಣಗೆರೆ, 9964280609
ಹುಡುಗಿಯರು ಫ್ಯಾಷನ್ ಮಾಡುವ ಮೂಲಕ ಹುಡುಗರಿಗೆ ಟೆನ್ಷನ್ ಕೊಡೋದೇಕೆ?
ಹುಡ್ಗೀರು ಫ್ಯಾಷನ್ ಮಾಡದೇ ಇದ್ದರೆ ಫ್ಯಾಷನ್ ಡಿಸೈನರ್ ಮಧು ನಿರುದ್ಯೋಗಿಯಾಗಿಬಿಡ್ತಾರೆ.
-ಬಾಣಭಟ್ಟ