ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಆಳುವ ಕೂಟದ ಪೇಚು

Srinivasa Murthy VN
Updated On : 11 Dec 2013, 11:33 am

ಇತ್ತೀಚಿನ ರಾಜಕೀಯ ಬೆಳವಣಿಗೆಗಳಿಂದಾಗಿ, ಕೇಂದ್ರದಲ್ಲಿ ಆಳುವ ಕೂಟವಾದ ಸಂಯುಕ್ತ ಪ್ರಗತಿಪರ ಕೂಟ ನಿಜವಾಗಲೂ ಸಂಕಷ್ಟದಲ್ಲಿ ಸಿಕ್ಕಿಬಿದ್ದಿದೆ. ಒಂದು ಕಡೆ ಸಂಸತ್ತಿನಲ್ಲಿ ಎದುರಾಳಿ ಪಕ್ಷಗಳ ಎಡೆಬಿಡದ ದಾಳಿ, ಇನ್ನೊಂದು ಕಡೆ ಕೂಟದ ನಾಯಕ ಪಕ್ಷವಾದ ಕಾಂಗ್ರೆಸ್ಸಿನಲ್ಲಿ ಬೇರೆ ಬೇರೆ ಕಾರಣಗಳಿಂದ ಬಂಡಾಯ, ಸಾಲದೆಂಬಂತೆ ಕೂಟದ ಇತರ ಪಕ್ಷಗಳ ಕೂರಂಬುಗಳು.
ರಾಜಸ್ಥಾನ, ಮಧ್ಯಪ್ರದೇಶ, ಚತ್ತೀಸ್‌ಗಢ ಹಾಗೂ ದೆಹಲಿ ವಿಧಾನ ಸಭೆ ಚುನಾವಣೆ ಫಲಿತಾಂಶ ಹೊರ ಬೀಳುತ್ತಿದ್ದಂತೆಯೇ, ಆಳುವ ಕೂಟದ ಅತಿ ಹಿರಿಯ ಸದಸ್ಯ ಶರದ್ ಪವಾರ್ ಅವರು ಕಾಂಗ್ರೆಸ್ಸಿನ ದುರ್ಬಲ ನಾಯಕತ್ವವನ್ನು ಅನುಮಾನಕ್ಕೆ ಆಸ್ಪದವೇ ಕೊಡದ ರೀತಿಯಲ್ಲಿ ಟೀಕಿಸಿದರು, ಅದಕ್ಕೆ ಕೂಟದ ನಾಯಕರೂ ಪ್ರತಿಕ್ರಿಯೆ ನೀಡಲಿಲ್ಲ. ಪಕ್ಷದ ನಾಯಕತ್ವವನ್ನು ಕಾಂಗ್ರೆಸ್ಸಿಗರೂ ಸಮರ್ಥಿಸಿಕೊಳ್ಳಲಿಲ್ಲ.
 ದೆಹಲಿಯಲ್ಲಿ ಸರ್ಕಾರದ ಸೂತ್ರಗಳನ್ನು ಹಿಡಿದಿದ್ದ ಕಾಂಗ್ರೆಸ್ಸಿನ ಹೀನಾಯ ಸೋಲಿಗೆ ಹೊಣೆಗಾರಿಕೆಯನ್ನು ಹೊತ್ತ ಹ್ಯಾಟ್ರಿಕ್ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರು ತಮ್ಮ ಪಕ್ಷವೇ ತಮಗೆ ಅಗತ್ಯವಾಗಿದ್ದ ಬೆಂಬಲವನ್ನು ನೀಡಲಿಲ್ಲ ಎಂದು ಗೋಳಾಡಿಕೊಂಡರೂ, ದೆಹಲಿಯ ಕಾಂಗ್ರೆಸ್ ನಾಯಕರು ತಮ್ಮ ಮಾನವೃತವನ್ನು ಮುರಿಯಲಿಲ್ಲ.
ಚತ್ತೀಸ್‌ಗಢದಲ್ಲಿ ಕಾಂಗ್ರೆಸ್ ಸೋಲಿಗೆ ಜವಾಬ್ದಾರಿಯನ್ನು ಹೊತ್ತಿರುವ ಚರಣದಾಸ್ ಪಕ್ಷದ ರಾಷ್ಟ್ರೀಯ ಮುಖಂಡರಿಂದ ಅಗತ್ಯವಾಗಿದ್ದ ನೆರವು ಸಿಗಲಿಲ್ಲ ಎಂದು ಬಹಿರಂಗವಾಗಿಯೇ ಹೇಳಿದ್ದಾರೆ.
ಇದೆಲ್ಲಕ್ಕೂ ಕಿರೀಟವಿಟ್ಟಂತೆ, ಕಾಂಗ್ರೆಸ್ಸಿನ ಬೌದ್ಧಿಕ ನಾಯಕ, ಸ್ವದೇಶೀ ವಾಮ ಚಿಂತಕ ಮಣಿ ಶಂಕರ ಅಯ್ಯರ್ ಅವರು ತಮ್ಮ ಒಂದು ಅಂಕಣದಲ್ಲಿ, ದಿಕ್ಕು ದೆಸೆ ತಪ್ಪಿರುವ ಕಾಂಗ್ರೆಸ್ ಕೆಲವು ಕಾಲ ಪ್ರತಿಪಕ್ಷವಾಗಿ ಕೆಲಸ ಮಾಡಿ, ಬೇರು ಮಟ್ಟದಿಂದ ದಿಲ್ಲಿಯವರೆಗೂ ಪಕ್ಷದಲ್ಲಿ ಜನತಾಂತ್ರಿಕ ವ್ಯವಸ್ಥೆಯನ್ನು ಗಟ್ಟಿಗೊಳಿಸಿದರೆ ತನ್ನ ಸಹಜ ಸ್ಥಾನವಾದ ಆಳುವ ಪಕ್ಷದ ಸ್ಥಾನ ತಾನೇ ತಾನಾಗಿ ಅದಕ್ಕೆ ಲಭ್ಯವಾಗುತ್ತದೆ ಎಂದಿದ್ದಾರೆ.
ಇದಿಷ್ಟೂ ವಿಧಾನ ಸಭೆ ಚುನಾವಣೆಗಳಲ್ಲಿನ ಸೋಲಿನ ಹತಾಶೆಯ ತತ್‌ಕ್ಷಣದ ಪ್ರತಿಕ್ರಿಯೆ ಎನಿಸಿದರೂ, ಆಂಧ್ರ ಪ್ರದೇಶದ ವಿಭಜನೆ, ತೆಲಂಗಾಣದ ರಚನೆಯ ನಿರ್ಧಾರವನ್ನು ಪ್ರತಿಭಟಿಸಿ, ಸೀಮಾಂಧ್ರ ಪ್ರದೇಶದ ಆರುಮಂದಿ ಲೋಕಸಭೆ ಸದಸ್ಯರು ಸರ್ಕಾರದಲ್ಲಿ ಅವಿಶ್ವಾಸ ಸೂಚಿಸುವ ನಿರ್ಣಯದ ಮಂಡನೆಗೆ ಅನುಮತಿ ಕೋರುವ ಮನವಿಗೆ ಸಹಿ ಹಾಕಿದ್ದಾರೆ. ಇಂತಹ ವರ್ತನೆ ಸರಿಸಾಟಿ ಇಲ್ಲದ ಪಕ್ಷ ವಿರೋಧಿ ಚಟುವಟಿಕೆಯಾದರೂ, ಅಧಿಕೃತವಾಗಿ ಕಾಂಗ್ರೆಸ್ ಪ್ರತಿಕ್ರಿಯೆ ಪ್ರಕಟಿಸಿಲ್ಲ.
ಆಂಧ್ರಪ್ರದೇಶದ ಈಗಿನ ಕಾಂಗ್ರೆಸ್ ಮುಖ್ಯಮಂತ್ರಿ ಕಿರಣ್ ರೆಡ್ಡಿ ಅವರೂ ತೆಲಂಗಾಣ ರಾಜ್ಯ ರಚನೆಯನ್ನು ಪ್ರತಿಭಟಿಸಿದ್ದೂ ಆಗಿದೆ. ಅನಿವಾರ್ಯವಾದರೆ ಅವರು ತಮ್ಮದೇ ಆದ ಪ್ರತ್ಯೇಕ ರಾಜಕೀಯ ಪಕ್ಷವನ್ನೇ ರಚಿಸಿಕೊಳ್ಳುವ ಸಂಭವವೂ ಇದೆ.
ಆಳುವ ಕೂಟವನ್ನು ಹಿಂದೆಯೇ ಬಿಟ್ಟು ಹೊರಗೆ ಬಂದಿರುವ ಡಿಎಂಕೆ ಸಂಸದೀಯ ವೆಂದು ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಮನ್ ರಾಜನ್ ಹೇಳಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಗಲಭೆ-ಗೊಂದಲಕ್ಕೆ ಅಂಜಿ ಸಂಸತ್ತಿನ ಅಧಿವೇಶನವನ್ನು ಬಲಿಗೊಡುವ ತಟಸ್ಥ ನೀತಿ ಜನತಂತ್ರಕ್ಕೇ ಮಾರಕ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement