ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಕವಿಗಳ ಕಲ್ಪನೆಗೂ ಪ್ರೇಮಿಗಳ ಕಲ್ಪನೆಗೂ ವ್ಯತ್ಯಾಸವೇನು?

Srinivasa Murthy VN
Updated On : 11 Dec 2013, 11:35 am

ಆರೀಫ್ ದಾವಣಗೆರೆ, 9964280609
ಸಮಯದ ಅರಿವೆ ಅರಿಯದ ಹುಡುಗಿಯರು ಕನ್ನಡಿ ಮುಂದೆ ಹೆಚ್ಚು ನಿಲ್ಲುತ್ತಾರಲ್ಲ?
ಸಮಯದ ಅರಿವಿಗಿಂತ 'ಅರಿವೆ'ಯ ಅರಿವು ಶ್ರೇಷ್ಠ ಎಂಬ ಸಿದ್ಧಾಂತ!

ಎಂ. ಬಿ. ಕೃಷ್ಣಮೂರ್ತಿ, 9449130531
ಕವಿಗಳ ಕಲ್ಪನೆಗೂ ಪ್ರೇಮಿಗಳ ಕಲ್ಪನೆಗೂ ವ್ಯತ್ಯಾಸವೇನು?
ಕವಿ ಕಲ್ಪನೆಯಿಂದ ಕವಿತೆಯ ಶಬ್ದಗಳು ಹುಟ್ಟುತ್ತವೆ, ಪ್ರೇಮಿಗಳ ಕಲ್ಪನೆ ಬರೀ ಶಬ್ದಕ್ಕೆ ಕಾರಣವಾಗುತ್ತದೆ.

ಯು. ಪ್ರಶಾಂತ. ತೀರ್ಥಹಳ್ಳಿ, 9844444120
ಸರ್ಕಾರಿ ಯೋಜನೆಗಳನ್ನು ಸೃಷ್ಟಿ, ಸ್ಥಿತಿ, ಲಯಕ್ಕೆ ಹೋಲಿಸಬಹುದೇ?
ಹೆಚ್ಚಿನ ಸರ್ಕಾರಿ ಯೋಜನೆಗಳು ವಾಸ್ತವದಲ್ಲಿ ಸೃಷ್ಟಿಯೇ ಆಗಿರುವುದಿಲ್ಲವಾದ್ದರಿಂದ ಮುಂದುವರಿದ ಪ್ರಕ್ರಿಯೆಗಳ ಬಗ್ಗೆ ಯೋಚಿಸುವ ಗೊಡವೆ ಇಲ್ಲ.

ಬಿ. ಎಮ್. ಪರಶಿವಮೂರ್ತಿ, ಬೆಂಗಳೂರು
ಗಂಡಿನ ಅಳುವಿಗೂ, ಹೆಣ್ಣಿನ ಅಳುವಿಗೂ ವ್ಯತ್ಯಾಸವೇನು?
ಹೆಣ್ಣಿನ ಅಳುವಿಗಷ್ಟೇ ಆಳುವ ಶಕ್ತಿ ಇದೆ!

ಫ್ಯಾಷನ್ ಡಿಸೈನರ್ ಮಧು, 9945737427
ಪ್ರೀತಿಯಲ್ಲಿ ಸೋತವರನ್ನು ಕೊನೆಯವರೆಗೂ ಕಾಡುವುದೂ ಅಗಲಿಕೆಯ ನೋವ, ವಿರಹದ ನೋವ?
ಯಾವುದೂ ಅಲ್ಲ. ಮತ್ತೊಂದು ಆಕರ್ಷಣೆಯ ಬಯಕೆ!

-ಬಾಣಭಟ್ಟ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement