ಭಾನುವಾರ ಮಾತ್ರವಲ್ಲದೇ ದಿನವೂ 'ಖುಷಿ' ಸಿಗುವಂತಿದ್ದರೆ?
ಓಂಚನ್ನೇಶ್ ಅರಬಿಳಚಿಕ್ಯಾಂಪ್, 990739725
ಭಾನುವಾರ ಮಾತ್ರವಲ್ಲದೇ ದಿನವೂ 'ಖುಷಿ' ಸಿಗುವಂತಿದ್ದರೆ?
ಭಾನುವಾರ ಬರುತ್ತೆ ಖುಷಿ, ಆದರೂ ವಾರಪೂರ್ತಿ ಇರುತ್ತೆ ಖುಷಿ.
ವಿ. ಹೇಮಂತಕುಮಾರ, 9035992900
ನಾನು ಯಾವ ಬಿಲ್ಲನ್ನೂ ಮುರಿಯಲಿಲ್ಲ, ಯಾವ ಮೀನನ್ನೂ ಕೊಲ್ಲಲಿಲ್ಲ ಆದರೂ ಅವಳು ಹೇಗೆ ನನಗೆ ಗಂಟುಬಿದ್ದಳು?
ಬಿಲ್ಲು ಮುರಿಯುವುದು ಹಳೆಯ ವಿಧಾನ. ಬಿಲ್ಲು ಕಟ್ಟುವುದು ಆಧುನಿಕ ವಿಧಾನ!
ಸಿ.ನಾಗರಾಜ, ಅರದೋಟ್ಲು, ಭದ್ರಾವತಿ
ಜಾತಿಬೇಲಿ ದಾಟಿ ಮದುವೆಯೆಂಬ ಭದ್ರಕೋಟೆಯಲ್ಲಿ ಬಂಧಿಯಾಗುವ ಮೊದಲೇ ಊರುಬಿಟ್ಟಿದ್ದಾರಲ್ಲ?
ಊರು ದಾಟಿದ ಮೇಲೆಯೇ ಬೇಲಿ ಸಿಗೋದು!
ಪೇಂಟರ್ ಪಾಪು
ಜನಸೇವೆಯೇ ಜನಾರ್ದನ ಸೇವೆ ಅಂತಾರೆ ಯಾಕೆ?
ಅದಕ್ಕೇ ಜನಾರ್ದನ ಪೂಜಾರಿ ಅವರು ಆಗಾಗ ಸರ್ಕಾರದ ಕಿವಿ ಹಿಂಡುತ್ತಿರುತ್ತಾರೆ!
ಹರಳಹಳ್ಳಿ ಪುಟ್ಟರಾಜು, ಪಾಂಡವಪುರ, 9632838088
ಗಂಡಿಗಿದ್ದಷ್ಟು ಸ್ವಾತಂತ್ರ್ಯ ಹೆಣ್ಣಿಗೇಕಿಲ್ಲ ಗುರುಗಳೇ?
ಕಾಲ ಬದಲಾಗಿದೆ. ಹೆಣ್ಣಿಗಿರುವಷ್ಟು ಸ್ವಾತಂತ್ರ್ಯ ಈಗ ಗಂಡಿಗಿಲ್ಲ ಮೇಷ್ಟ್ರೇ.
-ಬಾಣಭಟ್ಟ