ಪ್ರೇಮ ನಿವೇದನೆಗೆ ಗುಲಾಬಿ ಹೂ ನೀಡಲೇಬೇಕೆ?
ಪೇಂಟರ್ ಪಾಪು, ಸಂತೇಮರಹಳ್ಳಿ, ಚಾಮರಾಜನಗರ
ಹುಡುಗಿಯರಿಗೆ ಹೆಚ್ಚು ಹಣ ಸಂಪಾದನೆ ಮಾಡುವ ಗಂಡನೆಬೇಕು ಯಾಕೆ?
ಹಣ ಕಂಡರೆ ಹೆಣವೂ ಬಾಯ್ಬಿಡುವಾಗ ಹೆಣ್ಣು ಬಾಯ್ಬಿಡುವುದು ಅಚ್ಚರಿಯೇನಲ್ಲ.
ರಮೇಶ ಭಟ್ ಆವರ್ಸೆ, ಮೈಸೂರು, 9164276058
ಲವ್ ಕ್ಲಿಕ್ ಆದರೆ ಹುಡುಗೀನ ಕೂರಿಸಿಕೊಂಡು ಪಲ್ಸರ್ ಬೈಕ್ನಲ್ಲಿ ಸುತ್ತಾಟ. ಲವ್ ಫೇಲ್ ಆದ್ರೆ?
ಗಾಡೀದು ಬಿಡು ಬಾಡಿ ಪಲ್ಸ್ ಡೌನ್ ಆಗುತ್ತೆ!
ಪವನಕುಮಾರ ಕೆ.ವಿ. ಬಳ್ಳಾರಿ, 9900515957
ಪ್ರೇಮ ನಿವೇದನೆಗೆ ಗುಲಾಬಿ ಹೂ ನೀಡಲೇಬೇಕೆ?
ಸ್ವಲ್ಪ ಚೇಂಜ್ ಇರ್ಲಿ ಅಂತ ಡೇರೆ ಹೂವು ಕೊಟ್ಟುನೋಡು!
ಸಿ.ನಾಗರಾಜ, ಅರದೋಟ್ಲು, ಭದ್ರಾವತಿ
ಬೆವರು ಸುರಿಸೋ ರೈತನಿಗೆ, ಗಡಿಕಾಯೋ ಯೋಧನಿಗೆ ಸತ್ತ ಮೇಲೆ ಪರಿಹಾರ. ಇದು ಜುಟ್ಟಿಗೆ ಮಲ್ಲಿಗೆ ಇಟ್ಟಂತಲ್ಲವೇ?
ನಮ್ಮ ಜುಟ್ಟನ್ನು ಅವರ ಕೈಗೆ ಕೊಟ್ಟಮೇಲೆ ಅವರು ಇಟ್ಟಾಗ ಮಲ್ಲಿಗೆ ಇಡಿಸ್ಕೋಬೇಕಷ್ಟೇ.
ಯಕ್ಷ ಮೈಸೂರು,
ಫ್ಯಾಷನ್ ಡಿಸೈನರ್ ಮಧು 'ಡಿಸೈನ್' ಮಾಡೋದು ಮೇಲ್ ಗಾ, ಫಿಮೇಲ್ಗಾ?
ಅವರದ್ದು ಯುನಿಸೆಕ್ಸ್ ಫ್ಯಾಷನ್!
-ಬಾಣಭಟ್ಟ