ಕರೆನ್ಸಿ ಖಾಲಿಯಾಗಿದೆ, ಕನಸಿನಲ್ಲಿ ಬಂದು ಮಾತಾಡ್ತೀನಿ ಅಂತಾಳಲ್ಲ?
ವಿ. ಹೇಮಂತಕುಮಾರ್ 9035992900
ಕೊಳಲು ಹಿಡಿದವರೆಲ್ಲ ಕೃಷ್ಣನಲ್ಲ, ಬಿಲ್ಲು ಹಿಡಿದವರೆಲ್ಲ ರಾಮ ಅಲ್ಲ, ಲೇಖನಿ ಹಿಡಿದವರೆಲ್ಲ...?
ಚೆಕ್ಕಿಗೆ ಸಹಿ ಹಾಕುವುದಿಲ್ಲ.
ಸಿ. ನಾಗರಾಜ, ಭದ್ರಾವತಿ
ಜಾತಿಗೊಂದು ಕಾನೂನು ಮಾಡಿ, ನಾವೂ ಜಾತ್ಯತೀತರು ಎಂದು ಹೇಳಿಕೊಳ್ಳುವುದೇಕೆ?
ಜಾತಿ ಪ್ರಜ್ಞೆ ಅತಿಯಾಗಿರೋದ್ರಿಂದಲೇ ಜಾತ್ಯತೀತರು ನಾವು ಅಂತ ಹೊಸ ವ್ಯಾಖ್ಯಾನ ಮಾಡಿಕೊಂಡರಾಯಿತು.
ಫ್ಯಾಷನ್ ಡಿಸೈನರ್ ಮಧು, 9945737427
ಕರೆನ್ಸಿ ಖಾಲಿಯಾಗಿದೆ, ಕನಸಿನಲ್ಲಿ ಬಂದು ಮಾತಾಡ್ತೀನಿ ಅಂತಾಳಲ್ಲ?
ನಿಮ್ಮ ಸಿಗ್ನಲ್ ಎಳೆಯುವ ಸಾಮರ್ಥ್ಯಕ್ಕೆ ಈಗ ಬಂತು ಸವಾಲು!
ಬಸವನಗೌಡ ಹೆಬ್ಬಳಗೆರೆ
ಪ್ರೀತಿ ಸಿಕ್ಕರೆ ಸಾಕು ಅಂತಿದ್ದವಳು ಈಗ ಬಂಗಾರದ ಸರ ಉಡುಗೊರೆಯಾಗಿ ಕೇಳ್ತಿದ್ದಾಳಲ್ಲ?
ಒಂದು ಸಿಕ್ಕ ನಂತರ ಇನ್ನೊಂದರತ್ತ ತುಡಿಯುವುದು ಪ್ರಗತಿ.
ಹರಳಹಳ್ಳಿ ಪುಟ್ಟರಾಜು, 9632838088
ಮನುಷ್ಯ ಶಾಶ್ವತವಾಗಿ ಭೂಮಿ ಮೇಲೆ ಇರುವಂತಿದ್ದರೆ?
ಆಗ ಭೂಮಿ ಉಳಿದುಕೊಂಡಿರುವುದೇ ಡೌಟಾಗಿರ್ತಿತ್ತು!
-ಬಾಣಭಟ್ಟ