ಆರೀಫ್ (ಅಪ್ಪು) ದಾವಣಗೆರೆ, 9964280609
ಆಂಟಿಯರ ಮನಸ್ಸು ಹುಡುಗಿಯರಿಗಿಂತಲೂ ಹೆಚ್ಚು ಚಂಚಲತೆಯಿಂದ ಕೂಡಿರುತ್ತದಲ್ಲಾ ಏಕೆ?
ಅನುಭವದಿಂದ
ಫ್ಯಾಷನ್ ಡಿಸೈನರ್ ಮಧು, 9945737427
ಪ್ರೇಮದಲ್ಲಿ ಮನಸು ಹೇಳಬಯಸುವ ನೂರಾರು ಮಾತುಗಳು ತುಟಿಯ ಮೇಲೆ ಬರುವುದೇ ಇಲ್ಲವಂತೆ ನಿಜವೇ?
ಹೇಳಲಾಗದ ನೂರಾರು ಮಾತುಗಳನ್ನು ಒಂದು ಮುತ್ತು ಹೇಳಬಲ್ಲದು!
ಫ್ಯಾಷನ್ ಡಿಸೈನರ್ ಮಧು, 9945737427
ಪುಣ್ಯಕೋಟಿ ಹಸುವಿನ ಹಾಲನ್ನು ಕುಡಿದರೂ ಮನುಷ್ಯ ಸುಳ್ಳು ಹೇಳುವುದೇಕೆ?
ಇದೆಲ್ಲ ನಂದಿನಿ ಹಾಲಿನ ಪರಿಣಾಮ!
ಓಂಚನ್ನೇಶ್ ಅರಬಿಳಚಿಕ್ಯಾಂಪ್, ಭದ್ರಾವತಿ, 9901257131
ಮಂಜಿನ ಹನಿ ಮುತ್ತಿಗೂ, ಹುಡುಗಿಯರು ಕೊಡೋ ಸಿ(ಕ)ಹಿ ಮುತ್ತಿಗೂ ಏನು ವ್ಯತ್ಯಾಸ?
ಮೊದಲನೇದು ಹೊಳೆಯುತ್ತೆ. ಎರಡನೇದು ಸೆಳೆಯುತ್ತೆ.
ವಿ. ಹೇಮಂತಕುಮಾರ, ಬೆಂಗಳೂರು, 9035992900
ಪೂಜಾ ಹೊರೆ ಬಿಸಾಕಿ ಸೈಕಲ್ ಹತ್ತಿದ್ದು ಯಾಕೆ ಸರ್?
ಹೊರೆ ಭಾರವಾಯ್ತಂತೆ. ಸೈಕಲ್ ಆದ್ರೆ ಹಾಯಾಗಿ ಕೂತ್ಕೊಂಡು ಹೋಗಬಹುದು ಅಂತ.
-ಬಾಣಭಟ್ಟ