ಸಂಪಾದಕೀಯ

ಪ್ರೇಮಿಗಳ ದಿನಾಚರಣೆಯನ್ನು ನೀವು ಆಚರಿಸಿದ್ರಾ ಭಟ್ರೇ?

ಕಾಳೀಹುಂಡಿ ಶಿವಕುಮಾರ್ ಮೈಸೂರು 9844883581
ಪ್ರೇಮಿಗಳ ದಿನಾಚರಣೆಯನ್ನು ನೀವು ಆಚರಿಸಿದ್ರಾ ಭಟ್ರೇ?
ಅದೊಂದೇ ದಿನ ಆಚರಿಸುವಷ್ಟು ಅರಸಿಕ ನಾನಲ್ಲ!

ರಮೇಶಭಟ್ ಅವರ್ತೆ, ಕುಂದಾಪುರ 9164276058
ಮಹಿಳೆಯರ ಮೇಲೆ ಅತ್ಯಾಚಾರ ತಪ್ಪಿಸಲು ಮುಸ್ಲಿಂ ಮಹಿಳೆಯರಂತೆ ಹಿಂದೂ ಮಹಿಳೆಯರಿಗೂ ಬುರ್ಖಾ ತೊಡುವ ಸಂಪ್ರದಾಯ ಜಾರಿಗೆ (ತಂದರೆ) ಹೇಗೆ?
ಗಂಡಸರೂ ಬುರ್ಖಾ ತೊಡುವಂತಾಗಲಿ ಎಂದು ಹಗಲು ಬಿಜೆಪಿಯಲ್ಲಿ, ರಾತ್ರಿ ಕೆಜೆಪಿಯಲ್ಲಿ ಇರುವವರ ಆಗ್ರಹವಂತೆ!

ಕೆ.ಎನ್. ನಾರಾಯಣರೆಡ್ಡಿ, ಕೆ.ಜಿ.ಎಫ್.
ನಮ್ಮ ದೇಶದಲ್ಲಿ ದುಷ್ಟರು ಹೆಚ್ಚಾಗುವ ಹಾಗೆ ಪೂಜಾಮಂದಿರಗಳೂ ಹೆಚ್ಚಾಗುತ್ತಿವೆಯಲ್ಲಾ; ಕಾರಣವೇನು?
ದುಷ್ಟರಿಗೆ ಸಾಂತ್ವನ ಸಿಗುವ ತಾಣ ಅದೊಂದೇ!

ಫ್ಯಾಷನ್ ಡಿಸೈನರ್ ಮಧು, 99457-37427
ಆ ಚೆಲುವಗೆ ಕಾಲ್ ಮಾಡಿದರೆ "ನೀವು ಕರೆ ಮಾಡಿರುವ ಸುಂದರಿ ಮೇಕಪ್‌ನಲ್ಲಿ ಬ್ಯುಸಿಯಾಗಿದ್ದಾಳೆ ಒಂದು ಗಂಟೆ ನಂತರ ಪುನಃ ಪ್ರಯತ್ನಿಸಿ" ಎಂಬ ಧ್ವನಿ ಕೇಳುತ್ತಲ್ಲಾ?
ನನ್ನ ಚೆಲುವೆಗೆ ಹೋಲಿಸಿದರೆ ಒಂದು ಗಂಟೆ ಕಾಯೋದೇ ವಾಸಿ!

ಬಸವನ ಗೌಡ ಹೆಬ್ಬಳಗೆರೆ, ಚನ್ನಗಿರಿ
ಸಿನಿಮಾದಲ್ಲಿ 'ಆದರ್ಶಪ್ರೇಮ'ದ ಸಂದೇಶವನ್ನು ಸಾರುವ ಕೆಲ ನಟಿಯರೇಕೆ ನಿಜ ಜೀವನದಲ್ಲಿ ಅದನ್ನು ಅನುಸರಿಸುವುದಿಲ್ಲ?
ವೇಶ್ಯೆಯ ಪಾತ್ರ ಮಾಡಿದ ನಟಿಯ ಬಳಿಯೂ ಹೀಗೇ ಕೇಳಿದರೆ ಕಷ್ಟ!

-ಬಾಣಭಟ್ಟ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮೋದಿ, ಶಾ ಭಯಗೊಂಡಿದ್ದು ನಮ್ಮ ಹೋರಾಟದಲ್ಲಿ ಅರ್ಧ ಗೆದ್ದಿದ್ದೇವೆ, CEC ರಾಜೀನಾಮೆ ನೀಡುವವರೆಗೆ ಹಿಂಜರಿಯುವುದಿಲ್ಲ': ಇಂದು CJP ಪ್ರತಿಭಟನೆ ಮುಂದುವರಿಕೆ

Riyadh ವಿಮಾನ ನಿಲ್ದಾಣದ ಮೇಲೆ ಕ್ಷಿಪಣಿ ದಾಳಿ: 12 ಮಂದಿ ಸಾವು, 300ಕ್ಕೂ ಹೆಚ್ಚು ಜನರಿಗೆ ಗಾಯ

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

CJP ಪ್ರತಿಭಟನೆಗೆ ದೇಶವಿರೋಧಿ ಶಕ್ತಿಗಳ ಸಾಥ್‌: ಭಾರತದ ವರ್ಚಸ್ಸಿಗೆ ಮಸಿ ಬಳಿಯುವ ಪ್ರಯತ್ನ..!

ಬರದಿಂದ ರೈತರು ಕಂಗಾಲಾಗಿದ್ದರೂ ಸಿಎಂ ಡಿಕೆಶಿಗೆ ಮಾತ್ರ ಸ್ಟಿಂಗ್ ಆಪರೇಷನ್'ನದ್ದೇ ಚಿಂತೆ: HDK ವ್ಯಂಗ್ಯ