ಚಿರತೆಯೊಂದು ಸಿಗರೇಟ್ ಸೇದುತ್ತಾ ನಿಂತಿತ್ತು. ಅಲ್ಲಿಗೆ ಬಂದ ಇಲಿ ಹೇಳಿತು.
ಇಲಿ: ಗುರೂ ಈ ನಶೆ ಏರಿಸುವ ವಸ್ತುವನ್ನು ಎಸೆದು, ನನ್ಹಿಂದೆ ಬಾ. ಕಾಡು ಎಷ್ಟು ಸುಂದರವಾಗಿದೆ ಅಂತ ತೋರಿಸ್ತೀನಿ. (ಚಿರತೆ ಇಲಿಯೊಂದಿಗೆ ಹೊರಟಿತು. ನಡೆಯುತ್ತಾ ಹೋದಾಗ ಆನೆಯೊಂದು ವಿಸ್ಕಿ ಕುಡಿಯುತ್ತಾ ಕುಳಿತಿತ್ತು)
ಇಲಿ: ಲೋ ಮಚ್ಚಾ, ನಶೆ ಏರ್ಸೋ ಪದಾರ್ಥಗಳನ್ನೆಲ್ಲ ಬಿಟ್ಬಿಡು. ನನ್ಹಿಂದೆ ಬಾ. ಕಾಡು ಎಷ್ಟು ಸುಂದರವಾಗಿದೆ ಅಂತ ತೋರಿಸ್ತೀನಿ. (ಆನೆಯೂ ಇಲಿಯೊಂದಿಗೆ ಹೊರಟಿತು. ಮುಂದೆ ಇವುಗಳಿಗೆ ಬ್ರಾಂಡಿ ಕುಡಿಯುತ್ತಾ ಕುಳಿತಿದ್ದ ಸಿಂಹ ಎದುರಾಯಿತು. ಇಲಿ ಎಲ್ಲರಿಗೂ ಹೇಳಿದಂತೆ ಸಿಂಹಕ್ಕೂ ಹೇಳಿತು. ಸಿಟ್ಟಿಗೆದ್ದ ಸಿಂಹ ಇಲಿಯ ಕಪಾಳಕ್ಕೆ ಜೋರಾಗಿ ಬಾರಿಸಿತು)
ಆನೆ: ಲೋ ಸಿಂಹ ನನ್ನ ಮಗನೇ. ಪಾಪ ನಮ್ಮ ಇಲಿಗೆ ಯಾಕೋ ಹೊಡೆದೆ?
ಸಿಂಹ: ಇವ್ನು ಲಾಸ್ಟ್ ಟೈಮ್ 'ಗಾಂಜಾ' ಸೇದ್ಬಿಟ್ಟು, 3 ಗಂಟೆವರೆಗೆ ಇದೇ ಥರ ನನ್ನನ್ನ ಕಾಡಲ್ಲೆಲ್ಲ ಆಡ್ಡಾಡ್ಸಿದ್ದ!