ಸಂಪಾದಕೀಯ

ನಾನು ನಿಮ್ಮ ಸಹೋದರ

ಯಾದವರಾವ್ ಜೋಶಿ ಬಾಲ್ಯದಿಂದಲೇ ಸಂಗೀತದ ಬಗ್ಗೆ ಅಪಾರ ಆಸಕ್ತಿ ಇದ್ದವರು. ಆದ್ದರಿಂದಲೇ ಅವರಿಗೆ ಸಂಗಿತ ಭಾಸ್ಕರ ಎಂಬ ಬಿರುದು ದೊರಕಿತ್ತು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಪರ್ಕಕ್ಕೆ ಬಂದಾಗ ಸಂಗೀತ ಸನ್ಯಾಸ ಸ್ವೀಕರಿಸಿದರು. 1941ರಲ್ಲಿ ಕರ್ನಾಟಕದ ಪ್ರಾಂತ ಪ್ರಚಾರಕರಾಗಿ ಆಗಮಿಸಿ ರಾಷ್ಟ್ರ ಕಾರ್ಯಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡರು.
ಐದು ದಶಕಗಳ ಕಾಲ ಕರ್ನಾಟಕ ನೆಲದಲ್ಲಿ ಸಂಘ ಶಾಖೆಗಳನ್ನು ಬಲಗೊಳಿಸಿದರು. ತಮ್ಮ ಚಿಂತನೆ, ಮಾತು ಮತ್ತು ನಡವಳಿಕೆಗಳಿಂದ ಎಲ್ಲರ ಗೌರವಾದರಗಳಿಗೆ ಪಾತ್ರರಾಗಿದ್ದರು. ಮುಂದೆ ದಕ್ಷಿಣ ಕ್ಷೇತ್ರೀಯ ಪ್ರಚಾರಕರಾದಾಗ ತಮ್ಮ ಸೇವಾಕ್ಷೇತ್ರವನ್ನು ವಿಸ್ತರಿಸಿಕೊಂಡರು. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಅವರು ಗಣನೀಯ ಪಾತ್ರ ವಹಿಸಿದರು.
ಕೀನ್ಯಾ, ಮಾರಿಷಸ್, ನೈರೋಬಿ, ಆಫ್ರಿಕಾ ಮುಂತಾದ ದೇಶಗಳಿಗೆ ಭೇಟಿ ನೀಡಿ ಅಲ್ಲಿನ ಸೇವಾಕಾರ್ಯಗಳ ಬಗ್ಗೆ ವಿಚಾರ ವಿನಿಮಯ ನಡೆಸಿದರು. ಅಲ್ಲಿದ್ದ ಭಾರತೀಯರಲ್ಲದೆ ಅಲ್ಲಿನ ಜನರ ಪ್ರೀತಿಯನ್ನೂ ಗಳಿಸಿದರು. ಅವರ ಸಮಸ್ಯೆಗಳನ್ನು ಅಲ್ಲಿನ ಸ್ವಯಂಸೇವಕರು ಬಗೆಹರಿಸಿ ನೆರವಾಗಬೇಕೆಂದು ಕರೆನೀಡಿದರು.
ಒಮ್ಮೆ ಯಾದವರಾಯರು ಕೀನ್ಯಾ ದೇಶದ ಪ್ರವಾಸದಲ್ಲಿದ್ದಾಗ 'ಕಿಸುಮು' ಎಂಬ ನಗರಕ್ಕೆ ಭೇಟಿಕೊಟ್ಟಿದ್ದರು. ಅಲ್ಲಿನ ಮೇಯರ್ ಜೋಶಿಯವರನ್ನು ಆತ್ಮೀಯವಾಗಿ ಸ್ವಾಗತಿಸಿ, ನೀವು ನಮ್ಮ ಗೌರವಾನ್ವಿತ ಅತಿಥಿ ಎಂದು ಸಂಭೋಧಿಸಿದರು. ಆಗ ಯಾದವರಾಯರು, ಎದ್ದುನಿಂತು 'ನಾನು ಇಲ್ಲಿಗೆ ಅತಿಥಿಯಾಗಿ ಬಂದಿಲ್ಲ. ಮೇಯರ್ ಅವರ ಸಹೋದರನಾಗಿ ಬಂದಿದ್ದೇನೆ. ನನಗೆ ನನ್ನ ಮನೆಗೆ ಬಂದಷ್ಟೇ ಸಂತೋಷವಾಗಿದೆ' ಎಂದಾಗ ಇಡೀ ಸಭೆ ರೋಮಾಂಚನಗೊಂಡಿತು. ಮೇಯರ್ ಅವರೂ ಈ ಮಾತನ್ನು ಕೇಳಿ ಕ್ಷಣಕಾಲ ಸ್ಥಂಭೀಭೂತರಾದರು. ಅವರಿಗೆ ಜೋಷಿಯವರ ಮಾತಿನಲ್ಲಿ ಭಾರತೀಯ ಜೀವನ ದರ್ಶನದ ಪರಿಚಯವಾಯಿತು.
ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಅವರ ಉತ್ತರದಿಂದ ತುಂಬಾ ಸಂತೋಷವುಂಟಾಗಿತ್ತು. ಆಗ ಅವರು ತಮ್ಮ ಆಸನದಿಂದ ಮೇಲೆದ್ದು ಜೋಶಿಯವರ ಬಳಿ ಬಂದು ಅವರನ್ನು ಬಿಗಿಯಾಗಿ ಹಿಡಿದಪ್ಪಿದರು. ಅವರ ಭಾವನೆಗಳಿಗೆ ಕೃತಜ್ಞತೆ ಸಲ್ಲಿಸಿದರು. ಏಕೆಂದರೆ ಅದೇ ಮೊದಲ ಬಾರಿಗೆ ಅಪರಿಚಿತ ವ್ಯಕ್ತಿಯೊಬ್ಬ ಮೊದಲ ಪರಿಚಯದಲ್ಲಿಯೇ ತನ್ನನ್ನು ಸಹೋದರ ಎಂದು ಅವರನ್ನು ಸಂಬೋಧಿಸಿದ್ದು.

-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್