ತಪ್ಪಾಯ್ತು ತಿದ್ಕೋತೀವಿ
ಬೆಂಗಳೂರಿನ ಕುಮಾರಸ್ವಾಮಿ ಬಡಾವಣೆಯಿಂದ ಎನ್.ಜಿ. ವೇಣುಗೋಪಾಲ್ ಪತ್ರ ಬರೆದಿದ್ದಾರೆ. ಅವರು ಬರೆಯುತ್ತಾರೆ-
'ಫೆಬ್ರವರಿ 10, ಭಾನುವಾರದ ಪತ್ರಿಕೆಯಲ್ಲಿ ಕಂಡ ಕೆಲ ತಪ್ಪುಗಳನ್ನು ನಿಮ್ಮ ಗಮನಕ್ಕೆ ತರುತ್ತಿದ್ದೇನೆ. ಮುಖಪುಟದಲ್ಲಿ ಕಂಡ ಮೂರು ತಪ್ಪುಗಳು:
1. 'ವಿಷ ವರ್ತಕರು ಬೇಡ' ಶೀರ್ಷಿಕೆಯಡಿಯ ಫೋಟೋ ಕೆಳಗಿನ ಬರಹದಲ್ಲಿ 'ಗೋವಿಂದ ಕಾರಜೋಳ' ಎಂಬುದು 'ಗೋವೀಂದ ಕಾರಜೋಳ' ಆಗಿದೆ.
2. 'ಮುಂದಿನ ಸಾಹಿತ್ಯ ಸಮ್ಮೇಳನ ಕೊಡಗಿನಲ್ಲಿ' ಶೀರ್ಷಿಕೆಯಡಿಯ ವರದಿಯ ಕೊನೆಯ ಸಾಲಿನಲ್ಲಿ 'ಕೊಡಗಿನಲ್ಲಿ ಕನ್ನಡ ಜಾತ್ರೆ ನಡೆಯಲಿದೆ' ಎಂಬಲ್ಲಿ 'ಕೊಡಿಗನಲ್ಲಿ ಕನ್ನಡ ಜಾತ್ರೆ ನಡೆಯಲಿದೆ' ಆಗಿದೆ.
3. 'ಕರುನಾಡಿಗೆ ಋಣಿ' ಶೀರ್ಷಿಕೆಯಡಿಯ ವರದಿಯಲ್ಲಿ ಕಾಲಂ 2ರ 2ನೇ ಸಾಲಿನಲ್ಲಿ 'ತುಂಬಿಕೊಳ್ಳುತ್ತಾರೆಂಬ ಪದ 'ತುಂಬಿಕೊಂಡುತ್ತಾರೆಂಬ' ಎಂದಾಗಿದೆ.
ಪುಟ 4ರಲ್ಲಿ 'ರಾಜ್ಯಕ್ಕೆ 2ನೇ ಬಾರಿ ಪ್ರತಿಬಿಂಬಿತ ಪಟ್ಟ' ವರದಿಯಲ್ಲಿನ 2ನೇ ಸಾಲಿನಲ್ಲಿ 'ಸಚಿವಾಲಯದ' ಪದ 'ಸಚಿವಾಲದಯ' ಆಗಿದೆ.
ಪುಟ 5ರಲ್ಲಿ 'ಮಾನವತೆಯಿಂದ ಸಮಾಜದಲ್ಲಿ ಶಾಂತಿ' ವರದಿಯ 19ನೇ ಸಾಲಿನಲ್ಲಿ 'ಜನರು ಬಡತನದಿಂದ' ಎಂಬಲ್ಲಿ 'ಜನರು ಬಡನತದಿಂದ' ಎಂದಾಗಿದೆ.
ಇದೇ ಪುಟದಲ್ಲಿ 'ಒಂದು ಲಕ್ಷಕ್ಕೂ ಅಧಿಕ ಜನರ ನಿರೀಕ್ಷೆ' ವರದಿಯ 7ನೇ ಸಾಲಿನಲ್ಲಿ '10 ಕೋಟಿ ಆದಾಯ ಬರುವ ಸಾಧ್ಯತೆಯಿದೆ' ಎನ್ನುವಲ್ಲಿ '10 ಕೋಟಿ 'ಆದಾದಯ' ಬರುವ ಸಾಧ್ಯತೆಯಿದೆ' ಎಂದಾಗಿದೆ.
ಇದೇ ವರದಿಯ 8ನೇ ಸಾಲಿನಲ್ಲಿ 'ಸಾಮಾನ್ಯ ವೀಕ್ಷಕರಿಗೆ' ಎನ್ನುವುದು 'ಸಾಮಾನ್ಯ ವಿಕ್ಷಕರಿಗೆ' ಎಂದಾಗಿದೆ.
ಇನ್ನು ಇದೇ ವರದಿಯ ಕೆಳಗಿನ 'ಎಚ್ಚರದಿಂದಿರಿ' ಶೀರ್ಷಿಕೆಯಡಿಯ ಮೊದಲ ಸಾಲಿನಲ್ಲಿ 'ನಿರೀಕ್ಷೆ ಇರುವುದರಿಂದ ಎನ್ನುವುದು 'ನಿರೀಕ್ಷೆ ಇರುವದರಿಂದ' ಆಗಿದೆ.
ಪುಟ 7ರಲ್ಲಿ 'ಸ್ವಲ್ಪ ದೊಡ್ಡ ತಪ್ಪೇ ಆಗಿದೆ. 'ವೇಶ್ಯೆ ವಿಚಾರಕ್ಕೆ ಸ್ನೇಹಿತನ ಕೊಲೆ' ವರದಿಯ ಪ್ಯಾರಾ 3ರ ಪ್ರಾರಂಭದಲ್ಲಿ ಮತ್ತು ಆರೋಪಿಗಳ ಫೋಟೋ ಅಡಿ ಬರಹದ ಎರಡು ಕಡೆಯಲ್ಲೂ ಕೊಲೆ ನಡೆದ ಬಗ್ಗೆ '2013ರ ಮಾರ್ಚ್ 5ರಂದು (ಮುಂದಿನ ತಿಂಗಳು) ನಡೆದಿದೆ ಎಂದಿದೆ. ಅದು 2012 ಮಾರ್ಚ್ 5ರಂದು ಎಂದಿರಬೇಕಿತ್ತು.
ಇದೇ ಪುಟದಲ್ಲಿ 'ಚುನಾವಣೆಗೆ ರೇಲ್ವೆ ಯೂನಿಯನ್ ತಯಾರಿ' ಶೀರ್ಷಿಕೆಯಡಿ ಒಂದು ವಾಕ್ಯ ಸರಿ ಇಲ್ಲ. 'ಅವರು, ಕಾರ್ಮಿಕರ ಅಗತ್ಯತೆಗಳಿಗೆ ಮಾನ್ಯತೆ ನೀಡುವ ಸಂಘಟನೆಯೊಂದನ್ನು ಅಧಿಕಾರಕ್ಕೆ ಬರುವ ಅಗತ್ಯವಿದೆ' ಎಂದರು' ಎಂದಿದೆ. ಇಲ್ಲಿ 'ಸಂಘಟನೆಯೊಂದನ್ನು' ಎಂಬಲ್ಲಿ 'ಸಂಘಟನೆಯೊಂದು' ಇರಬೇಕು. ಇಲ್ಲವೇ 'ಅಧಿಕಾರಕ್ಕೆ ಬರುವ' ಎಂಬಲ್ಲಿ 'ಅಧಿಕಾರಕ್ಕೆ ತರುವ' ಎಂದು ಇದ್ದರೆ ವಾಕ್ಯ ಸರಿ ಹೋಗುತ್ತಿತ್ತು.
'ಕುಡಿದು ಕಾರು ಓಡಿಸಿ ಬೈಕ್ಗೆ ಗುದ್ದಿದ ಎಎಸ್ಐ' ಶೀರ್ಷಿಕೆಯಡಿಯ ವರದಿಯ ಕೊನೆಯಲ್ಲಿ 'ಸಾರ್ವಜನಿಕರೇ ಮುಂದು ನಿಂತು' ಎಂಬಲ್ಲಿ 'ಸಾರ್ವಜಕನಿರೇ ಮುಂದು ನಿಂತು' ಆಗಿದೆ.
ಇನ್ನು ಇದೇ ಪುಟದಲ್ಲಿ '13ರಿಂದ ಚಿತ್ರದುರ್ಗ ಕಾಗಿನೆಲೆ ಮಹಾಸಂಸ್ಥಾನ ದಶಮಾನೋತ್ಸವ' ಶೀರ್ಷಿಕೆಯಡಿ ಪ್ಯಾರಾ 2ರ 4ನೇ ಸಾಲಿನಲ್ಲಿ 'ನೂತನ ದೇವಾಲಯದ ಪ್ರತಿಷ್ಠಾಪನಾ' ಎಂಬಲ್ಲಿ 'ನೂತನ ದೇವಾಲಯದ ಪ್ರತಿಷ್ಠಾನಾ' ಎಂದಿದೆ.
-ವಿಶ್ವೇಶ್ವರಭಟ್