ಲಕ್ಷ್ಮೀ ಮೋಹನ್‌ದಾಸ್, ಕಂಕನಾಡಿ, ಮಂಗಳೂರು
ಭಟ್ರೇ, ನಾನು ಕೇಳಬೇಕು ಅಂದುಕೊಂಡ ಪ್ರಶ್ನೆಗಳನ್ನು ನನಗಿಂತ ಮೊದಲು ಬೇರೆಯವರು ಕೇಳ್ತಾರಲ್ಲಾ. ಅದು ಹೇಗೆ?
ನೀವು ಅಂದುಕೊಂಡಿದ್ದನ್ನು ಅವರು ಕೂಡಲೇ ಮಾಡಿ ತೋರಿಸ್ತಾರೆ!
ಉಜ್ಜನಿ ಜಲೇಂದ್ರ, 8971857200
'ಕೇಳ್ರಮ್ಮೋ ಕೇಳಿ'ನ ಯಾವಾಗ ಶುರು ಮಾಡ್ತಾರೆ ಅಂತ ಕೇಳಿ ಎಂದು ನನ್ನವಳು ಕೇಳ್ತಾನೇ ಇರ್ತಾಳಲ್ಲ ಭಟ್ರೇ?
ಅಪ್ಪಂದಿರು ಕೇಳೋದು ಕಡಿಮೆ ಆದಾಗ!
ನೇರಲಗುಡ್ಡ ಶಿವಕುಮಾರ್, ಶಿರಾ, 9480343742
ಡ್ಯುಯಟ್ ಸಾಂಗ್ ಹಾಗೂ ಐಟಂ ಸಾಂಗ್‌ಗೆ ಇರುವ ವ್ಯತ್ಯಾಸವೇನು?
ಡ್ಯುಯಟ್ ಸಾಂಗ್‌ನಲ್ಲಿ ಇದ್ದ ಮಾನವನ್ನು ಐಟಂ ಸಾಂಗ್‌ನಲ್ಲಿ ತೆಗೀಬಹುದು!
ಬರ್ಕಲಿರಾಮ್ ಕಿರಗಂದೂರು, ಮಂಡ್ಯ, 9008741348
ಪ್ರೀತಿಯ ಸಂಕೇತವಾಗಿ ಗುಲಾಬಿ ಹೂವನ್ನೇ ಕೊಡಬೇಕಾ? ಚೆಂಡು, ಮಲ್ಲಿಗೆ ಹೂ ಕೊಟ್ಟರಾಗದೆ?
ಚೆಂಡು ಮಲ್ಲಿಗೆ ಕೊಟ್ರೆ ಅವರು ಗಾಡಿ ಮೇಲೆ ಇಟ್ರೆ ಕಷ್ಟ!
ರಮೇಶ್ ಭಟ್ ಆವರ್ಸೆ, ಕುಂದಾಪುರ, 9164276058
ಬಾಣಭಟ್ರೇ ನಿಮಗೆ ಯಾರೂ ಪ್ರಪೋಸ್ ಮಾಡಿಲ್ಲವೇ?
ಅವರ 'ಪೋಸ್' ನೋಡಿಯೇ ಹೆದರಿಕೆಯಾಯ್ತು!
-ಬಾಣಭಟ್ಟ