ಸಾರ್ವಜನಿಕ ಶೌಚಾಲಯದಲ್ಲಿ ಕುಳಿತಿದ್ದ ಕೋಲ್ಯನಿಗೆ ಪಕ್ಕದ ಟಾಯ್ಲೆಟ್‌ನಿಂದ ವ್ಯಕ್ತಿಯೊಬ್ಬ ಪ್ರಶ್ನಿಸಿದ.
ವ್ಯಕ್ತಿ: ಮತ್ತೇನು ಸಮಾಚಾರ ಸಾರ್?
ಕೋಲ್ಯ(ಗಾಬರಿಯಿಂದ): ಚೆನ್ನಾಗಿದೀನಿ ಸಾರ್.
ವ್ಯಕ್ತಿ: ಏನ್ ಮಾಡ್ತಿದೀರಿ?
ಕೋಲ್ಯ: ನಿಮ್ ಥರಾನೇ ಕೂತ್ಕೊಂಡಿದೀನಿ.
ವ್ಯಕ್ತಿ: ನಾನು ನಿಮ್ಮ ಹತ್ರ ಬರ್ಲಾ?
ಕೋಲ್ಯ(ಇನ್ನಷ್ಟು ಗಾಬರಿಯಿಂದ): ಹೇ ಬೇಡ ಬೇಡ, ನಾನು ಬ್ಯುಸಿ ಇದೀನಿ.
ವ್ಯಕ್ತಿ: ಸಾರ್ ನಿಮಗೆ ನಾನು ಆಮೇಲೆ ಕಾಲ್ ಮಾಡ್ತೀನಿ. ಯಾವನೋ ಕಳ್‌ನನ್ನ ಮಗ ಪಕ್ಕದ ಟಾಯ್ಲೆಟ್ಟಿಂದ ನನ್ನ ಪ್ರತಿ ಪ್ರಶ್ನೆಗೂ ಉತ್ತರ ಕೊಡ್ತಿದಾನೆ!