ಹರಳಹಳ್ಳಿ ಪುಟ್ಟರಾಜು, 9632838088
ನೆನಪೇ ಮರೆವಾಗಿದ್ದಿದ್ದರೆ ಪ್ರೇಮಿಗಳ ಪರಿಸ್ಥಿತಿ ಹೇಗಿರುತ್ತಿತ್ತು?
ದಾಂಪತ್ಯದಂತೆ!
ಕಂಚಿಗನಹಳ್ಳಿ ಧನಂಜಯ, 9141308498
ತೀರ್ಥಯಾತ್ರೆಗೂ ಪಾದಯಾತ್ರೆಗೂ ಏನು ವ್ಯತ್ಯಾಸ?
'ತೀರ್ಥ'ಯಾತ್ರೆ ನಂತರ ಪಾದಯಾತ್ರೆ ಅಪಾಯ ಎಂದಷ್ಟೇ ಹೇಳಬಹುದು!
ಕೆನ್ನಾಳು ಭಾಸ್ಕರ್, ಪಾಂಡವಪುರ 9036416729
ಹೆಂಡತಿಗೆ ಪ್ರಾಣ ಕೊಟ್ಟರೂ ತೃಪ್ತಿಯಾಗುವುದಿಲ್ಲ ತಾವು ಏನಂತೀರಾ?
ನಿಮ್ಮ ಹೆಸರಿನಲ್ಲಿರುವ ಇನ್‌ಶ್ಯೂರೆನ್ಸ್ ಹಣದ ಆಧಾರದಲ್ಲಿ ಈ ಪ್ರಶ್ನೆಗೆ ಉತ್ತರಿಸಬಹುದು!
ರಂಜಿತ್ ಎಸ್ ರಣಸಿಂಗ್, 8123679919
ಕಂಡಕ್ಟರ್ ಟಿಕೆಟ್ ಕೊಡುವಾಗ ನಗ್ತಾರೆ, ಚಿಲ್ರೆ ಕೊಡುವಾಗ ದುರುಗುಡ್ತಾರೆ...
ಕೇಳಿ ಹೇಳೋಣ ಅಂದ್ರೆ ಕಂಡಕ್ಟರ್ ರಾಜು ಅಡ್ರೆಸ್ಸಿಗೇ ಇಲ್ಲ!
ರಮೇಶ ಭಟ್ ಆವರ್ತೆ, 9164276058
ಮಾತೃಭಾಷೆ ಅಂತ ಕರೀತಾರೆ, ಪಿತೃಭಾಷೆ ಅಂತ ಯಾಕೆ ಹೇಳಲ್ಲ?
ಅಪ್ಪಂಗೂ ಒಂದು ಭಾಷೆ ಇರುತ್ತೆ ಅಂತ ಹೆಚ್ಚಿನವರು ಅಂದ್ಕೊಳೋದೆ ಇಲ್ಲವಾದ್ದರಿಂದ!
-ಬಾಣಭಟ್ಟ