ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಭಪ್ಪರೆ ಭಲರೆ ಧೋನಿ

Srinivasa Murthy VN
Updated On : 25 Feb 2013, 9:36 am

ಭಾರತ ಕ್ರಿಕೆಟ್ ತಂಡದ ಈಗಿನ ಕ್ಯಾಪ್ಟನ್ ಮಹೇಂದ್ರ ಧೋನಿ ದಶಕಕ್ಕೂ ಹಿಂದೆ ಟೆಸ್ಟ್ ತಂಡವನ್ನು ಸೇರಿದಾಗ, ಅವರ ಆಕರ್ಷಣೆ ಇದ್ದಿದ್ದು ಅವರ ತಲೆ ಕೂದಲಿನ ವಿಚಿತ್ರ ಸ್ವರೂಪ ಹಾಗೂ ಮನಸೋ ಇಚ್ಛೆ ಬೀಸುವ ಬ್ಯಾಟಿನಿಂದ.
ಹಲವಾರು ಬಾರಿ ಅವರು ಗೇಲಿಗೆ ತುತ್ತಾಗಿದ್ದಾರೆ. ಟೆಸ್ಟ್ ತಂಡದ ನಾಯಕರಾಗಿ ಅವರು ಆಯ್ಕೆಯಾಗಿದ್ದೂ ಆ ಕಾಲದಲ್ಲಿ ಬೇರೆ ಯಾರೂ ಸಿಗಲಿಲ್ಲ ಎನ್ನುವ ಕಾರಣಕ್ಕಾಗಿಯೇ ಎಂದು ಅನೇಕರು ಟೀಕಿಸಿದ್ದೂ ಉಂಟು.
ಕಳೆದ ವರ್ಷ ಭಾರತೀಯ ಕ್ರಿಕೆಟ್ ತಂಡದ ಕಳಪೆ ಸಾಧನೆಯ ಮಟ್ಟದ ಹಿನ್ನಲೆಯಲ್ಲಿ, ಸ್ವತಃ ಕ್ಯಾಪ್ಟನ್ ಧೋನಿಯ ವೈಯಕ್ತಿಕ ಸಾಧನೆ ಕಳಪೆಯಾಗಿರದೇ ಹೋದರೂ ಅವರ ಟೀಕಾಕಾರರ ಕಾಟ ಮಾಧ್ಯಮದಲ್ಲಿ ಸಾಕಷ್ಟಿತ್ತು.
ಅಂತಹವರೆಲ್ಲರಿಗೂ ಉತ್ತರ ನೀಡುವಂತೆ, ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಆಸ್ಟ್ರೇಲಿಯಾ ವಿರುದ್ಧದ ಪ್ರಥಮ ಟೆಸ್ಟ್‌ನಲ್ಲಿ ಬಾರಿಸಿದ ಭರ್ಜರಿ ದ್ವಿಶತಕ ಟೀಕಾಕಾರರ ಬಾಯಿ ಮುಚ್ಚಿಸುವ ರೀತಿಯ ಪ್ರದರ್ಶನ. ಗಳಿಸಿದ ರನ್‌ಗಳ ಸಂಖ್ಯೆಯ ದೃಷ್ಟಿಯಿಂದ ಅಷ್ಟೇ ಅಲ್ಲ, ಆ ರನ್‌ಗಳನ್ನು ಗಳಿಸಿದ ರೀತಿಯಿಂದಲೂ, ಮಹೇಂದ್ರ ಧೋನಿ ಅಭಿನಂದನೆಗೆ ಅರ್ಹರಾಗಿದ್ದಾರೆ. ಭಪ್ಪರೆ ಭ್ಲರೆ ಧೋನಿ ಎನ್ನುವ ಉದ್ಘೋಷ ಈಗಲೂ ಪ್ರಕಟವಾಗದೇ ಹೋದರೆ ಅದು ಅಸಹನೀಯ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement