ಶಾಪಿಂಗ್ ಮುಗಿಸಿಕೊಂಡು ಮನೆಗೆ ಬಂದ ಹೆಂಡತಿಯನ್ನು ಕೋಲ್ಯ ಕೋಪದಿಂದ ಕೇಳಿದ: 'ಅರೆ. ಮತ್ತೇನು ಹೊತ್ಕೊಂಡು ಬಂದೆ? ಕಳೆದ ವಾರಾನೇ...'
ಹೆಂಡತಿ(ಕೋಪದಿಂದ): ಏನಂದ್ರಿ? ಏನು ಕಳೆದ ವಾರ? ಕಳೆದ ವಾರ ಏನು? ಹೇಳಿ ಏನಂದ್ರಿ? ಏನು ಕಳೆದ ವಾರ...ಹಾಂ?
ಕೋಲ್ಯ(ಉಗುಳು ನುಂಗುತ್ತಾ): ಏನೂ ಇಲ್ಲಿ ಮಾರಾಯ್ತಿ. ಕಳೆದ ವಾರ ಒಂದೇ ಸೀರೆ ತೊಗೊಂಡಿದ್ದೆ, ಈ ವಾರ ಎರಡು ತೊಗೋಬೇಕಾಗಿತ್ತು ಅಂತ ಹೇಳೋದಕ್ಕೆ ಹೊರಟಿದ್ದೆ!
----
ಕೋಲ್ಯ ತರಕಾರಿ ಖರೀದಿಸೋದಕ್ಕೆ ಹೋದ. ಅಂಗಡಿಯವ ತರಕಾರಿಯ ಮೇಲೆಲ್ಲಾ ನೀರು ಚಿಮುಕಿಸುತ್ತಿದ್ದ. ಕೋಲ್ಯ ಕಾಯುತ್ತಲೇ ಇದ್ದ. ಬಹಳ ಹೊತ್ತು ನೀರು ಚಿಮುಕಿಸುವುದು ಮುಂದುವರಿದ ಮೇಲೆ ಕೋಲ್ಯ ರೇಗುತ್ತಾ ಅಂದ: 'ನಿನ್ನ ತರಕಾರಿಗೆ ಪ್ರಜ್ಞೆ ಬಂದಿದೆ ಅಂದ್ರೆ, ಎರಡು ಕಿಲೋ ಟೊಮೋಟೋ ಕೊಡಪ್ಪ!'