ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ
ನಮಗೆ ಬೀಳೋ ಕನಸುಗಳನ್ನು ರೆಕಾರ್ಡ್ ಮಾಡಿಕೊಂಡು ಮತ್ತೊಬ್ಬರಿಗೆ ತೋರಿಸುವಂತೆ ಇದ್ದಿದ್ದರೆ?ಕನಸುಗಳು ಬಿದ್ದ ಮರುದಿನವೇ ಏಟುಗಳೂ ಬೀಳುತ್ತಿದ್ದವು!
ಎಂ.ಬಿ.ಕೃಷ್ಣಮೂರ್ತಿ, ಚಾಮರಾಜನಗರ, 9449130531
ತಾಯಿಯ ಹಾರ್ಟು ಮೌಂಟ್ ಎವರೆಸ್ಟು, ಪ್ರೇಯಸಿಯ ಹಾರ್ಟು?
'ಅಮೌಂಟ್ ಎವರೆಸ್ಟು' ಅಂತಾರೆ ಹಣ ಖರ್ಚು ಮಾಡಿದವರು!
ಬಸವನಗೌಡ ಹೆಬ್ಬಳಗೆರೆ
ಜಿಡ್ಡಿನ ಅಂಶ ಇಲ್ಲದಿದ್ರೂ ಸಹ ಹೆಂಡವನ್ನೇಕೆ 'ಎಣ್ಣೆ' ಅಂತ ಕರೀತಾರೆ ಭಟ್ರೇ?
ಜಾರಿ ಬೀಳೋರು ಜಾಸ್ತಿ ಇರ್ತಾರಲ್ಲ ಅದಕ್ಕೆ!
ಹರಳಹಳ್ಳಿ ಪುಟ್ಟರಾಜು, ಪಾಂಡವಪುರ, 9632838088
ಪ್ರೀತಿಯ ಮಳೆಯಲ್ಲಿ ಮಿಂಚು ಗುಡುಗುಗಳೇ ಜಾಸ್ತಿ. ಯಾಕೆ?
ಅದು 'ಹಿಂಗಾರು' ಪ್ರೀತಿ ಇರಬೇಕು!
ವಿ. ಹೇಮಂತಕುಮಾರ್, ಬೆಂಗಳೂರು, 9035992900
ಯೌವನದಲ್ಲಿ ಮೂಡುವ ಪ್ರೀತಿಗೂ ಇಳಿವಯಸ್ಸಿನಲ್ಲಿ ಮೂಡುವ ಪ್ರೀತಿಗೂ ಏನು ವ್ಯತ್ಯಾಸ?
ಅದು ಪ್ರೇಮದಾಟ, ಇದು ಪ್ರೇಮದ ಕಾಟ!
-ಬಾಣಭಟ್ಟ