ಮರೆವು
ಹೆಂಡತಿಯನ್ನು ಮರೆಯಬಾರದು, ಅವಳ ವಯಸ್ಸನ್ನು ಮಾತ್ರ ಮರೆತುಬಿಡಬೇಕು
ಬುದ್ಧಿಯ ಮರೆಯಲ್ಲೇ ಅವಿತಿರುವ ಶತ್ರು
ಮರೆವು ಮಾತ್ರ ಮರೆತು ಹೋಗುವುದಿಲ್ಲ
ನಿಶ್ಚಿಂತೆಯಿಂದ ಇರಲು ದೇವರು ಕರುಣಿಸಿದ ವರ
ಹೆಚ್ಚು ಹೆಚ್ಚು ಸಾಲ ಕೊಳ್ಳುವುದರಿಂದ ಉಲ್ಬಣಿಸುವ ರೋಗ
ನಾವು ಕೊಟ್ಟಿದ್ದನ್ನು ಮರೆಯಬೇಕು, ಬೇರೆಯವರು ಕೊಟ್ಟಿದ್ದನ್ನು ಸ್ಮರಿಸಬೇಕು
ಮೊಟ್ಟ ಮೊದಲು ಪ್ರೇಯಸಿಯನ್ನು ನೋಡಿದ್ದನ್ನು ಯಾರೂ ಮರೆಯುವುದಿಲ್ಲ, ಕೆಟ್ಟ ನೆನಪು ಮರೆಯಲು ಹೇಗೆ ಸಾಧ್ಯ?
ಬೇಕೆಂದಾಗ ಬರದ, ಬೇಡವೆಂದಾಗ ಅಮರಿಕೊಳ್ಳುವ ವ್ಯಾಧಿ
ಒಪ್ಪು
ಮದಿವೆಯಾಗಲು ಒಮ್ಮೆ ಒಪ್ಪಿಕೊಂಡರೆ ಮತ್ತೆ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ
ಸುಮತಿಯ ಮಾತಿಗೆ ನೀಡುವ ಸಮ್ಮತಿ
ಪೊಲೀಸ್ ಸ್ಟೇಷನ್‌ನಲ್ಲಿ ಇದು ಅನಿವಾರ್ಯ, ತಪ್ಪು ಮಾಡಿರದಿದ್ದರೂ...
ತಪ್ಪು ಮಾಡವ್ರು ಯಾರು ಇಲ್ಲ, ಒಪ್ಪಿಕೊಳ್ಳುವವರೂ ಇಲ್ಲ
ಎರಡು ಜಪ್ಪಿದರೆ ತಂತಾನೆ ಒಪ್ಪುತ್ತಾರೆ
ಅವಳು ಒಪ್ಪಿದಳು...ಇಲ್ಲಿಗೆ ಕತೆ ಮುಗೀತು
ನಾನೊಪ್ಪಲ್ಲ ಎನ್ನುವುದು ತಪ್ಪಲ್ಲ...ತಪ್ಪಿ ಇದ್ದರೂ ಒಪ್ಪದಿರುವುದು ಸರಿಯಲ್ಲ
-ವಿಶ್ವನಾಥ ಸುಂಕಸಾಳ