ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಪ್ರಕೃತಿ ಮುನಿದರೆ ಸುನಾಮಿ. ಪ್ರೇಯಸಿ ಮುನಿದರೆ?

Srinivasa Murthy VN
Updated On : 4 Jul 2013, 10:20 am

ಬರ್ಕಲಿ ರಮೇಶ, ಕಿರಗಂದೂರು, ಮಂಡ್ಯ
ನೋಟು ಕೊಟ್ಟವರಿಗೆ ಓಟು ಕೊಡಲೇಬೇಕೆಂದು ಕಾನೂನು ಜಾರಿಗೆ ತಂದರೆ ಹೇಗಿರುತ್ತೆ?
ಆಗ ನೆರೆ ಬಂದಾಗ ಓಟು ಕೊಟ್ಟವರಿಗೆ ಮಾತ್ರ ಬೋಟು ಎಂಬ ಕಾನೂನೂ ಬರಬಹುದು!

ತಲವಾಟ್ ಮಂಜುನಾಥ, ಸಾಗರ, 9480931611
ಪ್ರಕೃತಿ ಮುನಿದರೆ ಸುನಾಮಿ. ಪ್ರೇಯಸಿ ಮುನಿದರೆ?
ಒಲಿದರೆ ಪ್ರಣಯ, ಮುನಿದರೆ ಪ್ರಳಯ!

ಕಾಳೀಹುಂಡಿ ಶಿವಕುಮಾರ್, ಮೈಸೂರು, 9844883581
ನೀವು ಎದೆ ತುಂಬಿ ಹಾಡುವುದು ಯಾವಾಗ ಭಟ್ರೇ?
ಎಸ್ಪಿ ಬಾಲಸುಬ್ರಹ್ಮಣ್ಯಂ ಅವರ ಉದ್ಯೋಗ ಕಳೆಯಬಾರದು ಅಂತ ಸುಮ್ನಿದೀನಿ.

ಎಂ.ಬಿ. ಕೃಷ್ಣಮೂರ್ತಿ, ಚಾಮರಾಜನಗರ, 9449130531
ವಯಸ್ಸಾಗುತ್ತಿದ್ದಂತೆ ಗಂಡ-ಹೆಂಡಿರು ಪರಸ್ಪರ ತುಂಬಾ ನಾಚಿಕೊಳ್ತಾರಲ್ಲ ಯಾಕೆ?
ನೆನಪುಗಳ ಮಾತು ಮಧುರವಾದ್ದರಿಂದ.

ಮಗ್ಗಳ್ಳಿ ಗುರು, ಬನವಾಸಿ, 9480931442
ಜೀವನ ಒಂದು ಆಟ ಅಂತಾರೆ. ಅದೇನು ವಾಲಿಬಾಲಾ? ಕ್ರಿಕೆಟ್ಟಾ?
ಅದು ನಿಮಗೆ ಸಿಕ್ಕ ಬಾಲ್‌ನ ಗಾತ್ರದ ಮೇಲೆ ಡಿಪೆಂಡ್ ಆಗುತ್ತೆ!

-ಬಾಣಭಟ್ಟ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement