ಊರಿಗೆ ಬಂದೋಳು ನೀರಿಗೆ ಬರಬೇಕು. ಬಂದು?
ಹರಳಹಳ್ಳಿ ಪುಟ್ಟರಾಜು, ಪಾಂಡವಪುರ, 9632838088
ಊರಿಗೆ ಬಂದೋಳು ನೀರಿಗೆ ಬರಬೇಕು. ಬಂದು?
ಸಿಂಪಲ್ಲು. ನೀರು ತೆಗೆದುಕೊಂಡು ಹೋಗಬೇಕು!
ತಲವಾಟ ಮಂಜು ಸಾಗರ, 9480931611
ಚಿಕ್ಕವನಿದ್ದಾಗ ಚುಂಬಿಸುತ್ತಿದ್ದಾಕೆ, ದೊಡ್ಡವನಾದಾಗ ಕೇಳಿದರೂ ಚುಂಬಿಸುತ್ತಿಲ್ಲ. ಕಾರಣವೇನು?
ಚಿಕ್ಕವನಿದ್ದಾಗ ಎತ್ತಿಕೊಳ್ಳುತ್ತಿದ್ದೆ. ಈಗಲೂ ಎತ್ತಿಕೋ ಎಂದು ಒತ್ತಾಯಿಸಿದರೆ ಎಂಬ ಭಯ.
ವಿ. ಹೇಮಂತಕುಮಾರ, ಬೆಂಗಳೂರು, 9035992900
ಎಲ್ಲರ ಮನೆಯ ದೋಸೆಯೂ ತೂತು ಆಗಿರುತ್ತದೆ ಏಕೆ?
ಕೆಲವರ ಮನೆಯ ಕಾವಲಿಯೇ ತೂತಾಗಿರುತ್ತದೆ!
ಫ್ಯಾಷನ್ ಡಿಸೈನರ್ ಮಧು, 9945737427
ಗೆಲ್ಲುವುದಿಲ್ಲ ಅಂತ ಗೊತ್ತಿದ್ರೂ ಕುದುರೆ ರೇಸ್‌ಗೆ ಹೋಗ್ತಾರೆ. ಸಿಗುವುದಿಲ್ಲ ಅಂತ ಗೊತ್ತಿದ್ರೂ ಹೆಣ್ಣಿನ ಹಿಂದೆ ಹೋಗ್ತಾರಲ್ಲಾ?
ಕೇಳೋದಿಲ್ಲ ಅಂತ ಗೊತ್ತಿದ್ರೂ ಮಕ್ಳಿಗೆ ಬುದ್ಧಿವಾದ ಹೇಳ್ತೀವಲ್ಲ ಹಾಗೆ!
ಬರ್ಕಲಿರಮೇಶ್, ಕಿರಗಂದೂರು, ಮಂಡ್ಯ, 9008741348
ಓದಿನ ಪರೀಕ್ಷೆಯಲ್ಲಿ ಪಾಸಾದರೆ ಮುಂದಿನ ತರಗತಿ ಗ್ಯಾರಂಟಿ. ಪ್ರೇಮ ಪರೀಕ್ಷೆಯಲ್ಲಿ ಪಾಸಾದರೆ?
ಶಾಲೆಗೆ ತರಗತಿ ಸೇರಿಸುವುದು ಗ್ಯಾರಂಟಿ!
-ಬಾಣಭಟ್ಟ