ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ. ಗಂಡೊಂದು ಒಲಿದರೆ?
ಜೆ. ಪಿ. ನಾಗರಾಜ, ದಾವಣಗೆರೆ 9901193811
ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ. ಗಂಡೊಂದು ಒಲಿದರೆ?
ಶಾಲೆಗೆ ಹೋಗುವುದಕ್ಕೆ ಮಗುವೊಂದು ಸಿದ್ಧವಾದಂತೆ ಎಂದೇ ಲೆಕ್ಕ!
ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ
ಕೆಲ ಹುಡುಗಿಯರು ಅಪ್ರಿಯವಾದ ಸತ್ಯಕ್ಕಿಂತ ಪ್ರಿಯವಾದ ಸುಳ್ಳನ್ನೇ ಜಾಸ್ತಿ ಇಷ್ಟಪಡುತ್ತಾರಲ್ಲ?
ಹುಡುಗರ ಬಳಿ ಪ್ರಿಯವಾದದ್ದೇ ಹೆಚ್ಚಿಗೆ ಸಿಗುತ್ತದಲ್ಲ..?
ಓಂ ಚೆನ್ನೇಶ್ ಅರಬಿಳಚಿ ಕ್ಯಾಂಪ್, ಭದ್ರಾವತಿ
ಫೋನ್ ಮಾಡದೆ ಬರೀ ಮಿಸ್ಡ್‌ಕಾಲ್‌ಕೊಡೋರಿಗೆ ಏನನ್ನಬೇಕು ಗುರುಗಳೇ?
ನೀವಾಗಿ ತಿರುಗಿ ಫೋನ್ ಮಾಡಿ ಏನೂ ಹೇಳಬೇಡಿ, ಸರಿ ಹೋಗುತ್ತಾರೆ.
ಕಲಾವಿದ ಸೀನು, ಚಿತ್ರದುರ್ಗ 9538641164
ಹುಡುಗರು ತಮ್ಮ ಪ್ರಿಯತಮೆಯನ್ನೇ 'ಪ್ರಾಣ'ವಾಗಿ ಕಾಣುವಾಗ, ತಮಗೆ ಪ್ರಾಣ ನೀಡಿದ ಹೆತ್ತವರು ನೆನಪಾಗಲ್ವ?
ತಾವೂ ಹೆತ್ತವರ ಹಾದಿಯನ್ನೇ ಅನುಸರಿಸಿ ಆದಷ್ಟು ಬೇಗ ಪ್ರಾಣ ನೀಡಬೇಕು ಎಂಬ ಧಾವಂತ ಅವರದ್ದು!
ವಿ. ಹೇಮಂತಕುಮಾರ್, 9035992900
ಆಂಟಿಯರೇಕೆ ವಾಕಿಂಗ್‌ಗೆ ಜತೆಯಲ್ಲಿ ನಾಯಿಯನ್ನೂ ಕರೆ ತರುತ್ತಾರೆ?
ಹಿಂದೆ ಬೀಳುವ ಉಳಿದ ಜೀವಿಗಳಿಗಿಂತ ನಾಯಿಯೇ ಭೇಷು ಎಂಬ ತೀರ್ಮಾನ ಇದ್ದಿರಬಹುದು.
-ಬಾಣಭಟ್ಟ