ಉದಾಸೀನ
ದಾಸಿಯ ಮೇಲಿನ ದಾಸನ ನಿರ್ಲಕ್ಷ
ಅಪೇಕ್ಷೆ ಇಲ್ಲದಾಗ ಹುಟ್ಟಿಕೊಳ್ಳುವ ಉಪೇಕ್ಷೆ
ಇದು ಬ್ರಹ್ಮಜ್ಞಾನಿಯ ಲಕ್ಷಣ, ಸೋಮಾರಿಯಲ್ಲಿರುವ ಅವಲಕ್ಷಣ
ಮನವಿಲ್ಲದ ಗಮನ
ಯಾರೇನೇ ವಾದ ಮಾಡಿದರೂ ಪ್ರತಿವಾದ ಮಾಡದ ನಿರ್ವೇದ ಮನೋಭಾವ
ನಮ್ಮನ್ನು ಟೀಕಿಸುವವರ ಬಗ್ಗೆ ಬೆಳೆಸಿಕೊಳ್ಳಬೇಕಾದ ಭಾವ. ಆದರೆ ಟೀಕೆಗಳ ಬಗ್ಗೆ ಅಲ್ಲ
ಮುಖ್ಯ ಗುರಿ ಬೇರೆಯದಿದ್ದಾಗ ಅಮುಖ್ಯ ಗುರಿಗಳ ಬಗೆಗಿನ ವಿಮುಖತೆ
ಸಿನಿಮಾ ಬೋರ್ ಹೊಡೆಸುವಂತಿದ್ದರೆ ಸೀನ್‌ಗಳ ಮೇಲೆ ನಮಗೆ ಮೂಡುವ ಭಾವ
ಯಾರಾದರೂ ತಮ್ಮ ಕಂತೆ ಪುರಾಣ ಬಿಚ್ಚಿದರೆಂದರೆ ಇದು ಹುಟ್ಟಿಕೊಳ್ಳುತ್ತದೆ...
ಎದುರಿಗೆ ಚೆಂದದ ಚೆಲುವೆಯಿರುವಾಗ ಹುಡುಗನ ದೃಷ್ಟಿಯಲ್ಲಿ ಉಳಿದೆಲ್ಲವೂ...
ರಾಜಕೀಯ ಸಭೆಗಳಲ್ಲಿ, ಕ್ಲಾಸ್‌ಗಳಲ್ಲಿ ನಮ್ಮನ್ನಾವರಿಸುವ ಭಾವ
ಆರಿಸಿ ಹೋದ ಮೇಲೆ ಆರಿಸಿ ಕಳಿಸಿದವರ ಮೇಲಿನ ಆರಿಸಿ ಹೋದವರ ಉಪೇಕ್ಷೆ
ವಿಶ್ವನಾಥ ಸುಂಕಸಾಳ
vishwasunkasal@yahoo.com