ಹುಡ್ಗೀರ ನೋಟವೆಂಬ ಯಾರ್ಕರ್ಗೆ ಹುಡುಗರು ಬೋಲ್ಡ್ ಆಗ್ತಾರಲ್ಲ ಭಟ್ರೇ?
ಖುಷಿ ಕೆ. ಗೌಡ, ಕಲ್ಲಹಳ್ಳಿ, ಹಾಸನ, 8277551189
ಅಂದು ಪ್ರೀತಿಯ ಅಲೆಯಲ್ಲಿ ತೇಲಿಸಿದಳು. ಆದರೆ ಇಂದು ಪ್ರೀತಿಸೇ ಇಲ್ಲವೆಂದು ನಟಿಸುತ್ತಿದ್ದಾಳಲ್ಲ?
ಅಲೆಯ ಬಲೆಯೋ!
ಓಂಚನ್ನೇಶ್ ಅರಬಿಳಚಿಕ್ಯಾಂಪ್, ಭದ್ರಾವತಿ, 9900739725
ಸುಮಧುರ ಭಾವನೆಗಳನ್ನು ಹಂಚಿಕೊಳ್ಳಲು ಹೆಂಡತಿ ಸೂಕ್ತವೋ, ಪ್ರೇಯಸಿ ಸೂಕ್ತವೋ?
ಹೆಂಡತಿಯೇ ಸೂಕ್ತ. ಸ್ವಂತದ್ದಾಗಿದ್ದರೆ ಅತ್ಯಂತ ಸೂಕ್ತ!
ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ
ಹುಡ್ಗೀರ ನೋಟವೆಂಬ ಯಾರ್ಕರ್ಗೆ ಕೆಲವು ಹುಡುಗರು ಬೋಲ್ಡ್ ಆಗ್ತಾರಲ್ಲ ಭಟ್ರೇ?
ಹುಡ್ಗೀರ ಬಾಲಿಗೆ ಬೋಲ್ಡ್ ಆಗದವರುಂಟೇ ಚೊಂಬೇಶ್ವರ!
ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ
ಕುಳಿತು ಉಣ್ಣುವವನಿಗೆ ಕುಡಿಕೆ ಹೊನ್ನು ಸಾಲದು. ಪ್ರೀತಿಯ ಬಲೇಲಿ ಬಿದ್ದವನಿಗೆ?
ದಿನಕ್ಕೆ 200 ಫ್ರೀ ಮೆಸೇಜು ಸಾಲದು!
ಸಿ. ನಾಗರಾಜ, ಅರದೋಟ್ಲು ಗ್ರಾಮ, ಭದ್ರಾವತಿ
ಸ್ವಾತಂತ್ರ್ಯ ಬಂದಾಗಿನಿಂದ ಬಡತನ ನಿರ್ಮೂಲನಾ ಯೋಜನೆ ಹಮ್ಮಿಕೊಂಡರೂ ಬಡವರ ಸಂಖ್ಯೆ ಹೆಚ್ಚಿದೆಯಲ್ಲಾ?
ಬಡತನ ನಿರ್ಮೂಲನೆ ಮಾಡಲು ಹೊರಟವರ ಬಡತನ ನೀಗಿದೆಯಲ್ಲಾ!
-ಬಾಣಭಟ್ಟ