ಮುಂದಾಳು
ಮುಂದೊಂದು ದಿನ ರಾಜ್ಯವನ್ನೇ ಆಳುವ ಬಯಕೆ ಉಳ್ಳವ
ಮಂದ ಜನರನ್ನು ಹಿಂದೆ ಕಟ್ಟಿಕೊಂಡವ
ಹಿಂದಾಳುಗಳೆಂಬ ಹೊಗಳುಭಟರಿಂದ ಕೂಡಿದ ಯೋಧ
ಈ ಆಳು ದುಡಿಯುವ ಆಳಲ್ಲ. ಅವರ ಮೇಲೆ ಆಳ್ವಿಕೆ ನಡೆಸುವವ
ಬ್ಯಾನರ್‌ಗಳಲ್ಲಿ ಕಾಣಿಸಿಕೊಳ್ಳುವವ
ಮುಂದಾಳು ಎಂದು ತನಗೆ ತಾನೇ ಕರೆದುಕೊಳ್ಳುವವನಿಗೆ ಬೇಗ ಟಿಕೆಟ್ ಸಿಗುತ್ತದೆ
ಯಾವುದಕ್ಕೂ ಹೆದರದ ಲೀ-ಡರ್
ನನ್ನ ಜೊತೆ ಬಂದರೆ ನಾಕ ತೋರಿಸುತ್ತೇನೆ ಎಂದು ನಂಬಿಸುವ ನಾಯಕ
ಗುಂಪಿನ ಗಾಂಪ
ಮಂದೆಯಲ್ಲಿ ಮುಂದಿರುವವ
ಉಳಿದವರನ್ನು ತನಗಿಂತ ಹಿಂದಿರುವಂತೆ ನೋಡಿಕೊಳ್ಳುವವ
ಚುನಾವಣೆ ಸಮೀಪಿಸುತ್ತಿದ್ದಂತೆ ಬೆಳಕಿಗೆ ಬರುವವ
ಮುಂದಾಳುವನ್ನು ನಂಬಿದವನ ಬಾಳು ಗೋಳು
ಹಿಂಬಾಲಕರ ತಪ್ಪಿಗೆ ಪೆಟ್ಟು ಬೀಳುವುದು ಈತನಿಗೇ
ಕೂಡಿರುವವರನ್ನು ಖಂಡ ಖಂಡ ಮಾಡಿ ತುಂಡರಿಸಿ ಕೂಡಿಸುವಂತೆ ನಟಿಸುವ ಮು-ಖಂಡ
ಹೋಳು ಹೋಳಾಗದಂತೆ ನೋಡಿಕೊಳ್ಳುವವನೇ ಮುಂದಾಳು
-ವಿಶ್ವನಾಥ ಸುಂಕಸಾಳ
vishwasunkasal@yahoo.com