ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಹೆಣ್ಣನ್ನು ನಿಂಬೆಹಣ್ಣಿಗೆ ಹೋಲಿಸುತ್ತಾರೆ ಏಕೆ?

Srinivasa Murthy VN
Updated On : 27 Jun 2013, 10:14 am

ರವಿಕುಮಾರ ಜಿ.ಬಿ., ಬೆಂಗಳೂರು
ಹೆಣ್ಣನ್ನು ನಿಂಬೆಹಣ್ಣಿಗೆ ಹೋಲಿಸುತ್ತಾರೆ ಏಕೆ?
ನೀನು ಬೇಕಾದರೆ ಗಾತ್ರವನ್ನಾಧರಿಸಿ ಗಜನಿಂಬೆಗೆ ಬೇಕಾದರೂ ಹೋಲಿಸು!

ಎಂ.ಬಿ. ಕೃಷ್ಣಮೂರ್ತಿ, ಚಾಮರಾಜನಗರ
ಬಚ್ಚಿಟ್ಟ ವಸ್ತುವಿನ ಬಗ್ಗೆ ಕುತೂಹಲ ಏಕೆ?
ಬಚ್ಚಿಟ್ಟದ್ದು ತನಗೆ, ಬಿಚ್ಚಿಟ್ಟಿದ್ದು ಪರರಿಗೆ!

ಶ್ರೀಧರ ಡಿ. ರಾಮಚಂದ್ರಪ್ಪ, ತುರವನೂರು, ಚಿತ್ರದುರ್ಗ
ಮದುವೆಯ ಪ್ರಥಮ ರಾತ್ರಿಗೆ 'ಹಾಲಿನ' ಬದಲು 'ಆಲ್ಕೋಹಾಲ್‌' ಪ್ರಯೋಗಿಸಿದರೆ ಹೇಗಿರುತ್ತೆ?
ಟೈಟು ಟೈಟು, ಫುಲ್ ಫೈಟು!

ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ
ಪ್ರೀತಿಯಲ್ಲಿ ಕೆಲ ಹುಡುಗರಿಗೆ ಓದಲು ಕುಳಿತರೆ ಪ್ರೀತಿಸಿದವಳ ಮುಖವೇ ಕಾಣುತ್ತದೆಯಂತಲ್ಲಾ?
ಪ್ರೀತಿಯಲ್ಲಿ ಬೀಳದಿದ್ದರೂ ಹುಡುಗರಿಗೆ ಓದುವುದರಲ್ಲಿ ಆಸಕ್ತಿ ಅಷ್ಟಕ್ಕಷ್ಟೇ ಬಿಡಿ.

ರಮೇಶ ಭಟ್ ಆವರ್ಸೆ, ಮೈಸೂರು, 9164276058
ಬಿಗ್‌ಬಾಸ್ ಮನೆಗೆ ಹೊಗೋಕೆ ನಿಮಗೆ ಆಹ್ವಾನ ಬಂದಿಲ್ವ ಬಾಣಭಟ್ರೇ?
ಆಹ್ವಾನ ಬಂದಿತ್ತು. ಬರೋಕೆ ಪುರುಸೊತ್ತಿಲ್ಲ ಅಂದಿದ್ದಕ್ಕೆ ಬಿಗ್‌ಬಾಸೇ ನಮ್ಮನೆಗೆ ಬರ್ತೀನಿ ಅಂದಿದಾರೆ.

-ಬಾಣಭಟ್ಟ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement