ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಪೋಸ್ಟಲ್ ವೋಟಿಂಗ್ ಸರಳಗೊಳಿಸಿ

Srinivasa Murthy VN
Updated On : 18 Mar 2013, 10:38 am

ವಿಧಾನಸಭಾ ಚುನಾವಣೆಯ ದಿನಗಳು ಸಮೀಪಿಸುತ್ತಿದೆ. ಕರ್ತವ್ಯನಿರತ ಚುನಾವಣಾ ಸಿಬ್ಬಂದಿ ಬಹುತೇಕ ಮತದಾರರು ತಮ್ಮ ಪವಿತ್ರ ಹಕ್ಕಿನಿಂದ ವಂಚಿತರಾಗುತ್ತಿರುವುದು ರಾಜಕಾರಣಿಗಳಿಗೆ ಮತ್ತು ಚುನಾವಣಾ ಆಯುಕ್ತರಿಗೆ ತಿಳಿದ ವಿಷಯವೇ ಆಗಿದೆ! ಸರ್ಕಾರಿ ನೌಕರರನ್ನೇ (ವಿಶೇಷವಾಗಿ ಶಿಕ್ಷಕ ಶಿಕ್ಷಕಿಯರು!) ಚುನಾವಣೆಯ ಮತದಾನ ಕಾರ್ಯಕ್ಕೆ ವಿವಿಧ ಸಿಬ್ಬಂದಿಗಳನ್ನಾಗಿ ನಿಯೋಜನೆಗೊಳಿಸುತ್ತಾರೆ. ಇಂತಹ ಕರ್ತವ್ಯನಿರತ ನೌಕರರಿಗೆ ಅಂಚೆ ಮೂಲಕ ಮತದಾನದ ಅವಕಾಶವಿದೆ. ಆದರೆ ಮತದಾನದ ಹಿಂದಿನ ಒಂದೆರಡು ದಿನಗಳಲ್ಲಿ, ಈ ಸಿಬ್ಬಂದಿ ತರಬೇತಿ, ಮತದಾನದ ಸಿದ್ಧತೆಯ ಸಾಮಗ್ರಿಗಳನ್ನು ಪಡೆಯಲು ಅದಾವುದೋ ಪರಿಚಯವಿಲ್ಲದ
ತಾಲ್ಲೂಕು ಕೇಂದ್ರವೋ, ಜಿಲ್ಲಾ ಕೇಂದ್ರದಲ್ಲೋ ನಾಯಿಪಾಡು ಅನುಭವಿಸುತ್ತಿರುತ್ತಾರೆ. ಈ ನಡುವೆ ಅಂಚೆ ಮತದಾನಕ್ಕೆ ಅನುಕೂಲವಾಗುವಂತೆ ಈ ಸಿಬ್ಬಂದಿ ವರ್ಗದವರಿಗೆ ಅಧಿಕೃತ ತಹಸೀಲ್ದಾರರ ಅಥವಾ ಗೆಝೆಟೆಡ್ ಆಫೀಸರ್‌ಗಳ ಮುದ್ರೆ ಒತ್ತಿಸಿಕೊಂಡು, ಸಹಿ ಮಾಡಿಸಿಕೊಳ್ಳಲು ಬಹುತೇಕ ನೌಕರರಿಗೆ ಸಾಧ್ಯವಾಗುವುದಿಲ್ಲ. ಇದರಿಂದಾಗಿ ಇಂತಹ ನೌಕರರು ಮತದಾನದಿಂದ ವಂಚಿತರಾಗುತ್ತಾರೆ. ಆದ್ದರಿಂದ ದಯ ಮಾಡಿ ಮತದಾನದಂದು ಕರ್ತವ್ಯನಿರತ ನೌಕರರು ಅಂಚೆಮತದಾನದ ಸದುಪಯೋಗದಿಂದ ವಂಚಿತರಾಗದಂತಹ ಸೌಲಭ್ಯ ಒದಗಿಸಿಕೊಡಲೆಂದು ವಿನಂತಿ. ತರಬೇತಿ ನೀಡುವ ಕೇಂದ್ರದಲ್ಲಿ ಅಥವ ಮಸ್ಟರಿಂಗ್ ಕೇಂದ್ರದಲ್ಲಿ ಡಿಮಸ್ಟರಿಂಗ್ ಕೇಂದ್ರದಲ್ಲಿ ನೌಕರರಿಗೆ ಅಂಚೆ ಮತದಾನದ ಸೌಲಭ್ಯ ತೊಡಕಾಗದಂತೆ ವ್ಯವಸ್ಥೆ ಮಾಡುವಂತೆ ವಿನಂತಿ. ನಾನು ಮಂಡ್ಯ ಜಿಲ್ಲಾ ಕೇಂದ್ರದಲ್ಲಿ ನೌಕರನಿದ್ದೇನೆ. ಅಂಚೆ ಮತದಾನದ ಸೌಲಭ್ಯದ ಉಪಯೋಗ ಪಡೆಯಲು ನಾನು ಶ್ರೀರಂಗಪಟ್ಟಣದ ತಾಲ್ಲೂಕು ತಹಸೀಲ್ದಾರರಲ್ಲಿಗೆ ಹೋಗಬೇಕಾಗುತ್ತದೆ. ಚುನಾವಣಾ ಸಿದ್ಧತೆ ತರಬೇತಿಗೆ ತೆರಳಿದ ನಂತರ ನನಗೆ ಚುನಾವಣೆ ಮುಗಿವವರೆಗೂ ಶ್ರೀರಂಗಪಟ್ಟಣಕ್ಕೆ ಹೋಗಲಾಗುವುದಿಲ್ಲ. ಮತದಾನದಿಂದ ವಂಚಿತನಾಗುತ್ತಾನೆ.
- ಕೊಕ್ಕಡ ವೆಂಕಟ್ರಮಣಭಟ್, ಮಂಡ್ಯ.

ಪಕ್ಷಾಂತರಿಗಳಿಂದ ದೂರವಿರಿ

ಅಧಿಕಾರದ ಆಸೆಗಾಗಿ ಪಕ್ಷಾಂತರಗೊಂಡರವನ್ನು ಯಾವುದೇ ಕಾರಣಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳುವುದು ಸೂಕ್ತವಲ್ಲ. ಸುಮಾರು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಅಧಿಕಾರ ಅನುಭವಿಸಿ ವಿರೋಧ ಪಕ್ಷವನ್ನು ಸೇರಿ ಆಪರೇಷನ್ ಕಮಲ ಎಂಬ ಅನೈತಿಕತೆಗೆ ಗುರಿಯಾಗಿ ಭ್ರಷ್ಟಾಚಾರದಿಂದ ಮಾನಹರಣಗೊಂಡು ತಿರುಗಿ ಕಾಂಗ್ರೆಸ್ ಪಕ್ಷ ಸೇರಿ ಮಾನ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಯೋಗೀಶ್, ಸೋಮಣ್ಣ ಸಹಿತವಾಗಿ ಯಾರನ್ನೂ ಸೇರಿಸಿಕೊಳ್ಳುವುದು ಒಳಿತಲ್ಲ. ಯುವನಾಯಕ ರಾಹುಲ್ ಗಾಂಧಿಯವರ ಅಭಿಪ್ರಾಯದಂತೆ ಕಳಂಕಿತರನ್ನು ರಾಜ್ಯದ ಕಾಂಗ್ರೆಸ್ ಬಾಗಿಲೊಳಕ್ಕೆ ಸೇರಿಸಿಕೊಳ್ಳುವುದಕ್ಕೆ ಆತುರ ಬೇಡ ಎಂದಿದ್ದಾರೆ. ಆತುರವಲ್ಲ ಆ ಕಳಂಕಿತರು ಬೇಡವೇ ಬೇಡ. ಅಂತಹ ಪಕ್ಷಾಂತರಿಗಳಿಂದ ಕಳಂಕವಾಗುತ್ತದೆಯೇ ಹೊರತು ಕಳಶಪ್ರಾಯವಾಗುವುದಿಲ್ಲ. ಕರ್ನಾಟಕ ಕಾಂಗ್ರೆಸ್ ರಾಜ್ಯ ಸಮಿತಿ ಪಕ್ಷಾಂತರಿಗಳನ್ನು ಸೇರಿಸಿಕೊಳ್ಳಬಾರದು ಎಂದು ನನ್ನ ಮನವಿ. ಮರಕೋತಿಯಾಟ ಆಡುವವರಿಗೆ ಕಡಿವಾಣ ಹಾಕಲಿ ಎಂದು ನನ್ನ ಆಶಯವಾಗಿರುತ್ತದೆ.
- ಈ.ಜಿ. ರೆಡ್ಡಿ, ಚರಕುಂಟೆ

ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement