ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಚುನಾವಣೆಯ ಪ್ರಚಾರದ ಅಸ್ತ್ರ

Srinivasa Murthy VN
Updated On : 20 Mar 2013, 11:06 am

ಕೇಂದ್ರದಲ್ಲಿ ಆಳುವ ಕಾಂಗ್ರೆಸ್ ಕೂಟ, ಮುಂದಿನ ಚುನಾವಣೆಯಲ್ಲಿ ಗೆಲುವಿಗಾಗಿ ಸಿದ್ಧಪಡಿಸಿರುವ ಬ್ರಹ್ಮಾಸ್ತ್ರವೆಂದೇ ಭಾವಿಸಲಾಗಿರುವ ಆಹಾರ ಭದ್ರತೆಯ ವಿಧೇಯಕವನ್ನು ಸಂಸತ್ತಿನಲ್ಲಿ ಮಂಡಿಸಲಾಗಿದೆ. ದೇಶದ ಶೇಕಡಾ 67 ರಷ್ಟು ಜನರಿಗೆ ತೀರ ಅಗ್ಗದ ದರದಲ್ಲಿ ಕನಿಷ್ಠ ಪ್ರಮಾಣದ ಅಕ್ಕಿ - ಗೋಧಿ, ಪೂರೈಸುವ ಯೋಜನೆ ಇದು. ಈ ಆಹಾರ ಭದ್ರತೆಯ ನೀತಿ ಕಾಯಿದೆಯ ರೂಪದಲ್ಲಿ ಜಾರಿಗೆ ಬಂದಾಗ ಬಡತನದ ರೇಖೆಯ ಮೇಲಿನವರು, ಕೆಳಗಿನವರು ಎನ್ನುವ ವ್ಯತ್ಯಾಸವೇ ಮಾಯವಾಗಿಬಿಡುತ್ತದೆ.
ತಿಂಗಳಿಗೆ ಒಂದು ಸಂಸಾರಕ್ಕೆ 35 ಕೇಜಿಗಳಷ್ಟು ಧಾನ್ಯ ಪೂರೈಕೆಯ ಬೃಹತ್ ಯೋಜನೆ ಇದು. ಇದು ಜಾರಿಗೆ ಬಂದಾಗ ಸರಕಾರ ಹೊರಬೇಕಾದ ಆಹಾರ ಸಬ್ಸಿಡಿ ಹೊರೆ 1.54 ಲಕ್ಷ ಕೋಟಿ ರೂಪಾಯಿಗಳಷ್ಟು.
ಬಡವರು - ಕಡು ಬಡವರೆಲ್ಲರಿಗೂ ಹಸಿವೆಯಿಂದ ಮುಕ್ತಿ ದೊರಕಿಸಿಕೊಡುವ ಈ ಯೋಜನೆಯ ಪರಿಣಾಮವಾಗಿ, ಬಜೆಟ್ ಕೊರತೆಯೂ ಹೆಚ್ಚಿ, ಹಣದ ಅತಿಪ್ರಸರಣವೂ ಹೆಚ್ಚುವುದು ಈಗಿನ ಸ್ಥಿತಿಯಲ್ಲಿ ಅನಿವಾರ್ಯ. ಸುಮಾರು ಎಂಬತ್ತು ಕೋಟಿಗೂ ಹೆಚ್ಚಿನ ಜನಸಂಖ್ಯೆಯ ಹೊಟ್ಟೆಯ ಪಾಡನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಕೇಂದ್ರ ಸರ್ಕಾರವೇ ವಹಿಸಿಕೊಳ್ಳುವುದಾದರೆ, ಅದು ಒಂದು ರೀತಿಯಲ್ಲಿ ಮಹಾ ಕ್ರಾಂತಿಯೇ. ಅಂತಹ ಕ್ರಾಂತಿ ಆಗಲೇಬೇಕೆನ್ನುವುದು ಎಲ್ಲ ಸಜ್ಜನರ ಬಯಕೆ.
2009ರ ಲೋಕಸಭೆ ಚುನಾವಣೆ ಸಮಯಕ್ಕೆ ಸರಿಯಾಗಿ ಬಂದ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಕಾಂಗ್ರೆಸ್ ಕೂಟವನ್ನು ದಡ ಸೇರುವಂತೆ ಮಾಡಿತು ಎನ್ನುವ ವ್ಯಾಖ್ಯಾನ ಪ್ರಚಾರದಲ್ಲಿದೆ. ಈಗ 2014 ರ ಚುನಾವಣೆಯಲ್ಲಿ ಆಹಾರ ಭದ್ರತೆ ಕಾಯಿದೆ ಅದೇ ಕೆಲಸವನ್ನು ಮಾಡೀತೇ ?

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement