ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ತಪ್ಪಾಯ್ತು ತಿದ್ಕೋತೀವಿ

Srinivasa Murthy VN
Updated On : 31 Mar 2013, 9:46 am

ಪತ್ರಿಕೆಯಲ್ಲಾದ ತಪ್ಪುಗಳ ಬಗ್ಗೆ ಬೆಂಗಳೂರಿನ ಎನ್.ಜಿ. ವೇಣುಗೋಪಾಲ್ ಅವರು ಬರೆದ ಪತ್ರ ಮಾರ್ಚ್ 31ರಂದು ಈ ಅಂಕಣದಲ್ಲಿ ಪ್ರಕಟವಾಗಿತ್ತು. ಆ ಪತ್ರದ ಮುಂದುವರಿದ ಭಾಗ-
"ಪುಟ 6ರಲ್ಲಿ 'ಅತ್ಯಾಚಾರಿಗಳ ಗಲ್ಲಿಗೆ ಆಗ್ರಹ' ಶೀರ್ಷಿಕೆಯಡಿ 5ನೇ ಸಾಲಿನಲ್ಲಿ 'ಕೂಡಲೇ' ಗಲ್ಲಿಗೇರಿಸಬೇಕೆಂದು ಎನ್ನುವುದು 'ಕೂಡಲೆ' ಗಲ್ಲಿಗೇರಿಸಬೇಕೆಂದು ಆಗಿದೆ.'
'ಇದೇ ವರದಿಯ ಪಕ್ಕದಲ್ಲಿನ ಬರಹದಲ್ಲಿ ಮತ್ತು 10ನೇ ಸಾಲಿನಲ್ಲಿ 'ಇನ್ನೂ' ಎನ್ನುವುದು 'ಇನ್ನು' ಎಂದಿದೆ.
ಪುಟ 10ರಲ್ಲಿ 'ಮಾರಾಟವಾದ ಮಗುವಿನ ಪಾಲಕರು ತುಮಕೂರು ಜಿಲ್ಲೆಯ ಪೋತಾನಹಳ್ಳಿಯವರು' ಶೀರ್ಷಿಕೆಯಡಿ ವರದಿಯ ಪ್ಯಾರಾ 3ರ 4ನೇ ಸಾಲಿನಲ್ಲಿ 'ವಾಪಸಾಗಿರಲಿಲ್ಲ' ಎನ್ನುವುದು 'ವಾಪಾಸಾಗಿರಲಿಲ್ಲ' ಎಂದಾಗಿದೆ' (ಈ ವಾಪಸ್ ಪದ ವಾಪಾಸ್ ಎಂದು ಒಂದೇ ಲೇಖನದಲ್ಲಿ 8 ಕಡೆ ಪ್ರಕಟವಾಗಿದ್ದರ ಬಗ್ಗೆ ಈ ಹಿಂದೆ ಬರೆದು ತಿಳಿಸಿದ್ದೆ. ಅದು ಈಗ ಮತ್ತೆ ಪುನರಾವರ್ತನೆಗೊಂಡಿದೆ. ಇರಲಿ)
'ಇದೇ ಪುಟ 10ರಲ್ಲಿನ 'ಸಹಜ ಸ್ಥಿತಿಯತ್ತ ಮಹಾಲಿಂಗಪುರ' ಶೀರ್ಷಿಕೆಯಡಿ ಪ್ಯಾರಾ 2ರ 2ನೇ ಸಾಲಿನಲ್ಲಿ 'ಅಂಗಡಿ ಮುಂಗಟ್ಟುಗಳು' ಎನ್ನುವುದು 'ಅಂಗಡಿ ಮಂಗಟ್ಟುಗಳು' ಎಂದಾಗಿದೆ.'
'ಮತ್ತೆ, ಇದೇ ಪುಟದ 10 'ಗಣ್ಯರಿಗೆ ಗುಲ್ಬರ್ಗ ವಿವಿ ಗೌಡಾ' ಶೀರ್ಷಿಕೆಯಡಿ ವರದಿಯ ಪ್ರಾರಂಭದಲ್ಲೇ ವೈಜನಾಥ ಪಾಟೀಲರು 'ವೈದ್ಯನಾಥ್‌' ಪಾಟೀಲರಾಗಿದ್ದಾರೆ.'
'ಪುಟ 12ರ ಮೇಲೆ ತುದಿಯಲ್ಲಿ ಪ್ರಕಟವಾಗಿರುವ ಶೀರ್ಷಿಕೆಯಲ್ಲಿ 'ಚಿಕ್ಕಮಗಳೂರಿನಲ್ಲಿ' ಎನ್ನುವುದು 'ಚಿಕ್ಕಮಗಳೂರುನಲ್ಲಿ' ಎಂದಾಗಿದೆ.'
'ಇದೇ ಪುಟದಲ್ಲಿ 'ಯುಪಿಎಸ್‌ಸಿ ಪರೀಕ್ಷಾ ವಿಧಾನದಲ್ಲಿ ಬದಲಾವಣೆ' ಶೀರ್ಷಿಕೆಯಡಿ ಪ್ಯಾರಾ 4ರ ಕೊನೆಯಲ್ಲಿ 'ಪತ್ರಿಕೆಗೆಳ ಸಂಖ್ಯೆಯನ್ನೂ' ಎನ್ನುವುದು 'ಪತ್ರಿಕೆಯಗಳ ಸಂಖ್ಯೆಯನ್ನೂ' ಆಗಿದೆ.'
'ಪುಟ 14ರಲ್ಲಿ 'ಜೀವ ಉಳಿಸಿದ ಸಾಕು ನಾಯಿ' ಶೀರ್ಷಿಕೆಯಡಿಯ ವರದಿಯಲ್ಲಿ ಫ್ರಾನ್ಸ್‌ನ ಮಹಿಳೆ ಬಗ್ಗೆ, 'ಆತ್ಮಹತ್ಯೆ ನಿರ್ಧಾರಕ್ಕೆ ಬಂದಿದ್ದರು, ಹಿತ್ತಲಿಗೆ ತೆರಳಿದ್ದರು, ಪರೀಕ್ಷೆಯನ್ನು ನಡೆಸಿದ್ದರು' ಎಂದು ಬಹುವಚನ ಪ್ರಯೋಗಿಸಿ, ಮುಂದಿನ ವಾಕ್ಯದಲ್ಲಿ "ಟ್ರಿಗರ್ ಅದುಮಿದ್ದಳು" ಎಂದು ಏಕವಚನ ಪ್ರಯೋಗವಾಗಿದೆ. ಹೀಗಾಗಬಾರದಲ್ಲವೇ?'
'ಪುಟ 15ರಲ್ಲಿ 'ಶೂಟಿಂಗ್ ರ್ಯಾಂಕಿಂಗ್: ವಿಜಯ್‌ಗೆ 2ನೇ ಸ್ಥಾನ' ಶೀರ್ಷಿಕೆಯಡಿ ಪ್ಯಾರಾ 2ರ 3ನೇ ಸಾಲಿನಲ್ಲಿ 'ಮುನ್ನಡೆ' ಪದ 'ಮೂನ್ನಡೆ' ಆಗಿದೆ. ಇಷ್ಟು ಸಾಕು, ತುಂಬಾ ಆಯ್ತು.'
'ಕೊನೆಯಲ್ಲಿ ಮುಕ್ತಾಯಕ್ಕೆ 13.3.13ರ ಪತ್ರಿಕೆಗೆ ಬಂದಿದ್ದೇನೆ: ಮಾರ್ಚ್ 13ರ ಪತ್ರಿಕೆಯ ಸಂಪಾದಕೀಯದಲ್ಲಿ 'ರಾಮ್‌ಸಿಂಗ್ ಅಸಹಜ ಸಾವು' ಶೀರ್ಷಿಕೆಯಡಿ ಪ್ಯಾರಾ 2ರ ಕೊನೆಯಲ್ಲಿ 'ಈ ಘಟನೆ ನಡೆದಿದ್ದು ಡಿಸೆಂಬರ್ 12ರ ರಾತ್ರಿ' ಎಂದಿದೆ. ಕ್ಷಮಿಸಿ. ಈ ಘಟನೆ ನಡೆದದ್ದು 'ಡಿಸೆಂಬರ್ 16ರ ರಾತ್ರಿ ಅಲ್ಲವೇ?"

-ವಿಶ್ವೇಶ್ವರಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement