ಪಾದರಕ್ಷೆ
ಪಾದರಕ್ಷೆ ಇದೇ ಶ್ರೀ ರಕ್ಷೆ
ಪಾದಗಳು ನಿತ್ರಾಣವಾಗದಂತೆ ಕಾಯುವ ಪಾದತ್ರಾಣ
ಚಪಲ ಚೆನ್ನಿಗರ ಚಪಲ ಏರಿಸುವ ಚಪ್ಪಲಿ
ಸನ್ಯಾಸಿಗಳ ಪಾದುಕೆ
ಇದು ದೇಶವನ್ನೇ ಆಳಬಹುದು ಎಂಬುದಕ್ಕೆ ಭರತನ ರಾಜ್ಯವೇ ಸಾಕ್ಷಿ
ಕಣ್ಣು ಮತ್ತು ನಾಲಗೆಯನ್ನು ಎಲ್ಲೆಂದರಲ್ಲಿ ಹರಿ ಬಿಟ್ಟರೆ ಕೆನ್ನೆ ಇದರ ಏಟಿನ ರುಚಿ ನೋಡಬೇಕಾಗುತ್ತದೆ
ಹೈ ಹೀಲ್ಡ್ ಆದರೆ ಇದು ಹುಡುಗಿಯರನ್ನು ಎತ್ತರಕ್ಕೇರಿಸುವ ಸಾಧನ
ನಮ್ಮ ಕಾಲ ಮೇಲೆ ನಾವು ನಿಲ್ಲಬೇಕು ಎಂದಿದ್ದರೆ ಮೊದಲು ಇದನ್ನು ಖರೀದಿಸಬೇಕು
ಕಲ್ಲು ಮುಳ್ಳುಗಳ ಹಾದಿ ಇದರದ್ದು
ದೇವಸ್ಥಾನಗಳಿಗೆ ಹೋದಾಗ ದೇವರಿಗಿಂತಲೂ ಹೆಚ್ಚು ನೆನೆಯುವುದು ಹೊರಗೆ ಬಿಟ್ಟ ಚಪ್ಪಲಿಗಳನ್ನೇ
ಕೆಲವರು ಮದುವೆ ಮನೆಗಳಿಗೆ ಹೋಗುವುದೇ ಇದನ್ನು ಬದಲಾಯಿಸಲು
-ವಿಶ್ವನಾಥ ಸುಂಕಸಾಳ
vishwasunkasal@yahoo.com