ಬಿರುದು
ಪ್ರತಿಭೆ, ಸಾಧನೆಗಳೆಲ್ಲ ಅನಾಯಾಸವಾಗಿ ತಿಳೆಯಲೆಂದು ಕೊಡಲ್ಪಡುವ ನಾಮ ವಿಶೇಷಣ
ಯಾರಿಗೆ ಯಾವುದು ಕಡಿಮೆಯಿದೆಯೋ ಅದನ್ನಾಧರಿಸಿಯೂ ಕೊಡಲಾಗುತ್ತದೆ. ಉದಾ: ಬುದ್ಧಿಜೀವಿ, ಮಾನವೀಯ ಇತ್ಯಾದಿ
'ಶ್ರೀಯುತ' ಎಂಬ ಬಿರುದಾಂಕಿತರೆಲ್ಲ ಧನವಂತರಲ್ಲ
ಶ್ರೀಮತಿಗಳಿಗೆಲ್ಲ ಹಣವೂ ಇರಬೇಕಾಗಿಲ್ಲ, ಮತಿಯಂತೂ ದೂರವೇ ಉಳಿಯಿತು
ನಿಮ್ಮ ಹೆಸರನ್ನು 'ಉದ್ದ'ವಾಗಿಸುವ ಅಡ್ಡ ಹೆಸರು
ನಿಮ್ಮ ವ್ಯಕ್ತಿತ್ವದ ಮೇಲೆ ದೃಷ್ಟಿ ಬೀಳುವಂತೆ ಮಾಡುವ ನಾಮಶೇಷ
ಬಿರುದುಗಳೆಲ್ಲ ವ್ಯಕ್ತಿತ್ವವನ್ನು ಬಿರಿದು ನೋಡಿ ಕೊಟ್ಟಿರುವುದಿಲ್ಲ
ಮಂತ್ರಿಗಳಿಗೆ 'ಮಾನ್ಯ'ಮಂತ್ರಿಗಳು ಎನ್ನುತ್ತೇವೆ. ಬಿರುದಿಗೂ ವಾಸ್ತವಕ್ಕೂ ಸಂಬಂಧವಿಲ್ಲ ಎನ್ನುವುದು ಇದಕ್ಕೆ
ಗೃಹಸ್ಥನೂ ಡಿಗ್ರಿಯನ್ನು ಪಡೆವ ಮೂಲಕ 'ಬ್ಯಾಚುಲರ್' ಎಂಬ ಬಿರುದು ಗಳಿಸಬಹುದು
ಉಪಾಧಿ ಎಂಬುದು ಇದಕ್ಕಿರುವ ಬಿರುದು
ಮಾನಗೇಡಿಗಳಿಗೂ ಮಾನ್ಯರೇ ಎನ್ನಬೇಕಾದದ್ದು ಕಲಿಧರ್ಮ
ಹಣ ಅಧಿಕಾರ ಇದ್ದವರನ್ನು ಹುಡುಕಿಕೊಂಡು ಹೋಗುತ್ತದೆ
ವಿಶ್ವನಾಥ ಸುಂಕಸಾಳ
vishwasunkasal@yahoo.com