ಹುಡುಗಿಯರು ಹೆಚ್ಚಾಗಿ ಮಿಸ್ಡ್ಕಾಲ್ ಕೊಡುತ್ತಾರೆ ಏಕೆ?
ರವಿಕುಮಾರ ಜಿ.ಬಿ., 9449669897
ಹುಡುಗಿಯರು ಹೆಚ್ಚಾಗಿ ಮಿಸ್ಡ್ಕಾಲ್ ಕೊಡುತ್ತಾರೆ ಏಕೆ?
ನೀವು ಅವರನ್ನು ಮಿಸ್ ಮಾಡ್ಕೋತಾ ಇರ್ತೀರ ಅಂತ ಅವರಿಗೆ ಗೊತ್ತಿರೋದ್ರಿಂದ!
ಕೊ.ಸು. ನರಸಿಂಹಮೂರ್ತಿ, ಮೈಸೂರು, 9945271782
ಕುಮ್ಮಿಯ ತಾಳಿಭಾಗ್ಯಕ್ಕೂ, ಸಿದ್ರಾಮಣ್ಣನ ಶಾದಿಭಾಗ್ಯಕ್ಕೂ ಇರುವ ವ್ಯತ್ಯಾಸವೇನು?
ಒಂದು ಜಾತಿ-ಧರ್ಮ ನೋಡ್ದೆ ತಾಳಿ ಕಟ್ಟೋರ್ಗೆ, ಇನ್ನೊಂದು ಧರ್ಮ ನೋಡಿ ತಾಳಿ ಕಟ್ಟೋರ್ಗೆ.
ಬರ್ಕಲಿರಾಮ ಕಿರಗಂದೂರು, ಮಂಡ್ಯ, 9008741348
ಮನುಷ್ಯನಿಗೆ ಬೆನ್ನಿನಲ್ಲೂ ಕಣ್ಣುಗಳಿದ್ದಿದ್ದರೆ?
ಬೆನ್ನಿಗೆ ಚೂರಿ ಹಾಕುವವರಿಗೆ ಕಷ್ಟವಾಗುತ್ತಿತ್ತು!
ಎಂ.ಬಿ. ಕೃಷ್ಣಮೂರ್ತಿ, ಚಾಮರಾಜನಗರ, 9449130531
ಗುಂಡು ಪಾರ್ಟಿಯಲ್ಲಿ 'ಚಿಯರ್ಸ್' ಅಂತ ಗಾಜಿನ ಲೋಟಗಳನ್ನು ಡಿಕ್ಕಿ ಹೊಡೆಸುತ್ತಾರಲ್ಲ ಯಾಕೆ?
ಗುಂಡು ಹಾಕಿದ ನಂತರ ಬಾಡಿಗಳೇ ಹಾಗೆ ಡಿಕ್ಕಿ ಹೊಡೆಯುವ ಅಪಾಯದ ಮುನ್ಸೂಚನೆಗಾಗಿ.
ಚಿರಪ್ರಭ ನಂಜನಗೂಡು, 8553793107
ಅನ್ನ-ಕ್ಷೀರ, ಶಾದಿ ಭಾಗ್ಯಗಳಾಯಿತು. ಮುಂದಿನ ಭಾಗ್ಯ ಯುವುದಿರಬಹುದು?
ಈಗಿರುವ ಭಾಗ್ಯಗಳನ್ನೇ ಉಳಿಸಿಕೊಂಡರೆ ಸಾಕಾಗಿದೆ.
ಬಾಣಭಟ್ಟ