ಗಂಡ ಹೆಂಡತಿ ಮಾತನಾಡದೇ ಮಲಗಿದ್ದರು.
ಗಂಡ ಹೆಂಡತಿ ಮಾತನಾಡದೇ ಮಲಗಿದ್ದರು. ಗಂಡ ಸಂಜೆಯಿಂದ ಏನೋ ಯೋಚನೆ ಮಾಡುತ್ತಾ ಇದ್ದ.
ಹೆಂಡತಿ ಯೋಚಿಸಿದಳು: ಇವ್ರು ಯಾಕೆ ನನ್ಜೊತೆ ಮಾತಾಡ್ತಾ ಇಲ್ಲ? ನನ್ನ ಮೇಲೆ ಪ್ರೀತಿ ಕಡಿಮೆ ಆಗಿರಬಹುದಾ? ಬೇರೇ ಹೆಂಗಸಿನ ಬಗ್ಗೆ ಯೋಚನೆ ಮಾಡ್ತಾ ಇದಾರಾ? ಅಥವಾ ಬೇರೆ ಹುಡುಗಿ ಜೊತೆ ಸಂಬಂಧ!? ಛೆ, ಛೆ, ಅಂಥವ್ರಲ್ಲ ಇವ್ರು. ಆದ್ರೂ ಗಂಡಸು ಜಾತಿ ಬಗ್ಗೆ ಹೇಳೋಕ್ಕಾಗಲ್ಲ! ಯಾಕ್ ಸುಮ್ನಿದ್ದಾರೆ ಅಂತ ಪತ್ತೆ ಹಚ್ಚೇ ಹಚ್ತೀನಿ. ಸಂಜೆಯಿಂದ ಇದೇ ಥರ ಇದಾರೆ...ಯಾಕಿರಬಹುದು? ಅವಳು ಎಲ್ಲೇ ಇರಲಿ, ಜಡೆ ಹಿಡಿದು ಕೇಳ್ತೀನಿ...ನನ್ನ ಮುಂದೆ ಈ ಆಟ ನಡೆಯೋದಿಲ್ಲ...ಹಾಂ!
ಗಂಡ ಸಂಜೆಯಿಂದ ಯೋಚನೆ ಮಾಡುತ್ತಾ ಇದ್ದ: ಇಶಾಂತ್ ಶರ್ಮಾಗೆ ಯಾಕೆ ಲಾಸ್ಟ್ ಓವರ್ ಕೊಟ್ಟ ಧೋನಿ?!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.