ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ನರಿ ಬುದ್ದಿ ಹೆಚ್ಚಾಗಿ ಯಾರಿಗೆ ಒಪ್ಪುತ್ತೆ?

Srinivasa Murthy VN
Updated On : 18 Nov 2013, 1:37 am

ಬರ್ಕಲಿ ರಮೇಶ ಕಿರಗಂದೂರು, ಮಂಡ್ಯ, 9008741348
ನರಿ ಬುದ್ದಿ ಹೆಚ್ಚಾಗಿ ಯಾರಿಗೆ ಒಪ್ಪುತ್ತೆ?
ನರಿಗೆ!

ಪ್ರಶಾಂತ ಮೇಲಾಡಿ, ತೀರ್ಥಹಳ್ಳಿ, 9844444120
ಗೆಳೆಯನೊಬ್ಬ ಆಟ ತಿಳಿಯದಿದ್ದರೂ ಮಹಿಳೆಯರ ಟೆನಿಸ್ ತಪ್ಪದೇ ವೀಕ್ಷಿಸುತ್ತಾನಲ್ಲಾ?
ಏನೂ ಅರ್ಥವಾಗದಿದ್ದರೂ ಗಾಲ್ಫ್ ನೋಡುವುದಕ್ಕಿಂತ ಮಹಿಳೆಯರ ಟೆನಿಸ್ ನೋಡುವುದೇ ವಾಸಿ!

ಜಗದೀಶ ಎಸ್. ಬೆಳಗಾವಿ, 8722444410
ರಾಜಕಾರಣ ಮಾಡಲು ಶಾಲೆಯ ಅವಶ್ಯ ಇದೆಯೇ?
ಇಂದಿನ ಮಕ್ಕಳೇ ಮುಂದಿನ ಮತಗಳು ಎಂಬ ಕಾಳಜಿ!

ಹೆಂಗಸರ ಬುದ್ದಿ ಮೊಣಕಾಲ ಕೆಳಗೆ ಎಂದು ಹೇಳುವ ಗಂಡಸರ ಬುದ್ದಿ ಎಲ್ಲಿ ಇರುತ್ತೆ?
ಅದಕ್ಕಿಂತ ಮೇಲೆ!

ಹರಳಹಳ್ಳಿ ಪುಟ್ಟರಾಜು, ಪಾಂಡವಪುರ, 9632838088
ಪ್ರೇಮಿಗಳಿಗಾಗಿ ಪ್ರತ್ಯೇಕ ಪಾರ್ಕ್ ವ್ಯವಸ್ಥೆ ಮಾಡಿದರೆ ಹೇಗಿರುತ್ತೆ?
ಅಲ್ಲಿ ಸೆಕ್ಯುರಿಟಿ ಗಾರ್ಡ್ ಆಗಲು ಪೈಪೋಟಿ ಶುರುವಾಗಬಹುದು!

-ಬಾಣಭಟ್ಟ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement