ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಹಣವೆಂದೂ ನನಗೆ ಆಕರ್ಷಣೆಯ ವಿಷಯವಾಗಲಿಲ್ಲ

Srinivasa Murthy VN
Updated On : 18 Nov 2013, 1:38 am

ಇದೀಗ ಪ್ರೊ.ಸಿ.ಎನ್.ಆರ್ ರಾವ್ ಅವರಿಗೆ ಭಾರತರತ್ನ ಪ್ರಶಸ್ತಿ ಬಂದಿರುವುದು ಕನ್ನಡಿಗರ ಸೌಭಾಗ್ಯ. ತಮ್ಮ ಇಡೀ ಜೀವನವನ್ನೇ ವಿಜ್ಞಾನಕ್ಕಾಗಿ ಮುಡುಪಾಗಿಟ್ಟ ಈ ವಿಜ್ಞಾನಿಗೆ ಹೆಚ್ಚು ಕಡಿಮೆ ವಿಶ್ವದ ಪ್ರತಿಷ್ಠಿತ ಪ್ರಶಸ್ತಿಗಳೆಲ್ಲವೂ ದೊರೆತಿವೆ. 60ಕ್ಕೂ ಹೆಚ್ಚು ಡಾಕ್ಟರೇಟ್ ಪದವಿಗಳನ್ನು ಪಡೆದಿದ್ದಾರೆ. 1500ಕ್ಕೂ ಹೆಚ್ಚು ಪ್ರಬುದ್ಧ ಸಂಶೋಧನಾ ಪ್ರಬಂಧಗಳನ್ನೂ, 45 ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಇವರ ಜೊತೆ ಕೆಲಸ ಮಾಡಿದ 140ಕ್ಕೂ ಹೆಚ್ಚು ಜನ ಪಿ.ಹೆಚ್.ಡಿ. ಪದವಿ ಗಳಿಸಿದ್ದಾರೆ. ಇವರ ಲೇಖನಗಳನ್ನು ಇದುವರೆಗೂ 40 ಸಾವಿರಕ್ಕೂ ಹೆಚ್ಚುಬಾರಿ ಪ್ರಸ್ತಾಪಿಸಲಾಗಿದೆ. ಇವರ ಸಂಶೋಧನಾ ಫಲಿತಾಂಶವನ್ನು ಆಧರಿಸಿ, ಅನೇಕ ರಾಷ್ಟ್ರಗಳು ಹಲವು ಕೈಗಾರಿಕಾ ಉತ್ಪನ್ನಗಳನ್ನು ಪಡೆಯುತ್ತಿವೆ. ರಾವ್ ಅವರು ತಮ್ಮ ಸಂಶೋಧನೆಗೆ ಸ್ವಾಮ್ಯ ಹಕ್ಕುಗಳನ್ನು (ಪೇಟೆಂಟ್) ಪಡೆಯದೆ ಮುಕ್ತವಾಗಿಟ್ಟಿದ್ದಾರೆ. ಅವರು ರಸಾಯನ ಶಾಸ್ತ್ರಜ್ಞರಾಗಿರುವುದಕ್ಕೆ ಹೆಮ್ಮೆ ಪಡುತ್ತಾರೆ. ಸಿ.ಎನ್.ಆರ್ ರಾವ್ ತಮ್ಮ ಇಡೀ ಜೀವನವನ್ನೇ ಸಂಶೋಧನೆಗೆ ಮೀಸಲಾಗಿಟ್ಟವರು. ಎಷ್ಟೋ ಬಾರಿ ವಿದೇಶ ಪ್ರವಾಸ ಮುಗಿಸಿ, ವಿಮಾನ ನಿಲ್ದಾಣದಿಂದ ನೇರವಾಗಿ ಪ್ರಯೋಗಶಾಲೆಗೆ ಹೋಗಿದ್ದುಂಟು. ಅವರ ಪತ್ನಿ ತಮಾಷೆಗೆ ಹೇಳುವುದುಂಟು- ರಾವ್ ಇಡೀ ಜೀವನದಲ್ಲಿ ಎರಡು ಮದುವೆಗಳಲ್ಲ ಮಾತ್ರ ಭಾಗವಹಿಸಿದ್ದಾರೆ. ಒಂದು ಅವರದ್ದು, ಇನ್ನೊಂದು ಅವರ ಪುತ್ರಿಯದು. ಇಂತಹ ಪ್ರತಿಭಾವಂತ ವಿಜ್ಞಾನಿಗೆ ವಿಶ್ವಾದ್ಯಂತ ಅನೇಕ ವಿಶ್ವ ವಿದ್ಯಾನಿಲಯಗಳು ಸಂದರ್ಶಕ ಪ್ರಾಧ್ಯಾಪಕ ಹುದ್ದೆಯನ್ನಲಂಕರಿಸಲು ಕರೆ ನೀಡಿದರೂ ಬೆಂಗಳೂರನ್ನೇ ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡು ನಾಡಿನ ಸೇವೆ ಸಲ್ಲಿಸುವ ನಿರ್ಧಾರ ಮಾಡಿದ್ದಾರೆ. ಮಧ್ಯಪ್ರಾಚ್ಯ ವಿಶ್ವವಿದ್ಯಾಲಯವೊಂದು ನಂಬಲಿಕ್ಕೆ ಸಾಧ್ಯವಿರದಷ್ಟು ಬೃಹತ್ ಪ್ರಮಾಣದ ವೇತನ ನೀಡಲು ಮುಂದೆ ಬಂದಿತ್ತು. ಆದರೆ ರಾವ್ ಅದನ್ನೂ ಸಹ ತಿರಸ್ಕರಿಸಿದರು. ಈ ಬಗ್ಗೆ ಅವರ್ನು ಪ್ರಶ್ನಿಸಿದಾಗ ಅವರು ಹೇಳಿದ್ದು ಇಷ್ಟೆ, "ಹಣವೆಂದೂ ನನಗೆ ಆಕರ್ಷಣೆಯ ವಿಷಯವಾಗಿಲ್ಲ". ಅವರಿಗೆ ಭಾರತೀಯ ವಿಜ್ಞಾನ ಮಂದಿರ ಮತ್ತು ಜವಹರಲಾಲ್ ನೆಹರೂ ಉನ್ನತ ಸಂಶೋಧನಾ ಸಂಸ್ಥೆಯ ಬಗ್ಗೆ ಅತೀವ ಆಸಕ್ತಿ. ಅಂದ ಹಾಗೆ ಭಾರತ ರತ್ನ ಸಿ.ಎನ್.ಆರ್. ರಾವ್ ಅವರು ಓದಿದ್ದು ಕನ್ನಡ ಮಾಧ್ಯಮದಲ್ಲಿ.

-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments