ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಅಭಿವೃದ್ಧಿ ಕೆಲಸಕ್ಕೆ ಕತ್ತರಿ

Srinivasa Murthy VN
Updated On : 19 Nov 2013, 11:08 am

ಕೇಂದ್ರ  ಸರ್ಕಾರದ ಬಜೆಟ್ ಕೊರತೆಯನ್ನು ಬಜೆಟ್ ಮಂಡನೆಯ ಸಮಯದಲ್ಲಿ ಪ್ರಕಟಿಸಿದ್ದ ಮಿತಿಗೇ ಸೀಮಿತಗೊಳಿಸಲಾಗುವುದೆಂದು ವಿತ್ತ ಮಂತ್ರಿ ಹಲವಾರು ಬಾರಿ ವಚನ ನೀಡಿದ್ದಾರೆ. ಅದಕ್ಕೆ ಬದ್ಧತೆಯನ್ನೂ ಪ್ರದರ್ಶಿಸಿದ್ದಾರೆ.
ಚಾಲ್ತಿ ವರ್ಷದಲ್ಲಿ ಹಲವು ಹತ್ತು ಕಾರಣಗಳಿಂದ ಆರ್ಥಿಕ ಪರಿಸ್ಥಿತಿಯಲ್ಲಿ ಪ್ರಗತಿಯ ಹಿನ್ನಡೆ ಕಂಡುಬಂದಿದ್ದರಿಂದ ಸರ್ಕಾರದ ಆದಾಯದ ಪ್ರಮಾಣದಲ್ಲಿ ತುಂಬಾ ಹೆಚ್ಚಳವನ್ನು ನೀರಿಕ್ಷಿಸುವಂತಿಲ್ಲ. ಅದೇ ಸಮಯದಲ್ಲೇ ಹಣದ ಅತಿಪ್ರಸರಣದ (ಇನ್‌ಫ್ಲೇಷನ್) ವೇಗ ಹೆಚ್ಚಿರುವುದರಿಂದ ಹೆಚ್ಚು ಕಡಿಮೆ ಎಲ್ಲ ಬಾಬುಗಳಲ್ಲೂ ವೆಚ್ಚದ ಪ್ರಮಾಣ ಹೆಚ್ಚುವ ಸಂಭವವಿದೆ. ಹೀಗಾಗಿ ಸರ್ಕಾರಕ್ಕೆ ವೆಚ್ಚದ ಮೇಲೆ ಮಿತಿ ವಿಧಿಸಲೇ ಬೇಕಾದ ಅನಿವಾರ್ಯತೆ ಮೂಡಿರುವುದೂ ನಿಜ. ಈ ಹಿನ್ನೆಲೆಯಲ್ಲಿ ಸಚಿವ ಚಿದಂಬರಮ್ ಕೊರತೆಯ ಪ್ರಮಾಣವನ್ನು ಕಡಿಮೆ ಮಾಡಲು ಯೋಜನೇತರ ಬಾಬುಗಳಿಗೆ ಒದಗಿಸಿರುವ ಹಣಕ್ಕೇ ಕತ್ತರಿ ಬೀಳುವ ಅನಿವಾರ್ಯತೆಯನ್ನೂ ಪ್ರಸ್ತಾಪಿಸಿದ್ದಾರೆ. ಈಗಾಗಲೇ ಕೆಲವು ಇಲಾಖೆಗಳಿಗೆ ಈ ವಿಚಾರದಲ್ಲಿ ಕೇಂದ್ರದಿಂದ ಸೂಚನೆ ಬಂದಿದೆ.
ಯೋಜನೇತರ ಬಾಬುಗಳೆಂದರೆ, ಪ್ರಧಾನವಾಗಿ ಪ್ರಾಥಮಿಕ ಶಿಕ್ಷಣ, ಆರೋಗ್ಯ ರಕ್ಷಣೆ ಹಾಗೂ ಜನಕಲ್ಯಾಣ ಕಾರ್ಯಕ್ರಮಗಳೇ. ಆ ಕಾರ್ಯಕ್ರಮಗಳಿಗೇ ಕತ್ತರಿ ಬಿದ್ದರೆ ಅದರ ನೋವನ್ನು ಅನುಭವಿಸುವವರು ಜನಸಾಮಾನ್ಯ ವರ್ಗಗಳೇ. ಅದು ಈಗಿನ ಅನಿವಾರ್ಯ. ಇಂತಹ ಸನ್ನಿವೇಶದಲ್ಲಿ ಕೇಂದ್ರ ಹಾಗೂ ರಾಜ್ಯಗಳ ಸರ್ಕಾರಗಳು ತಮ್ಮ ದಂಧರಾಳಿತನಕ್ಕೆ ಕಡಿವಾಣ ಹಾಕಿಕೊಳ್ಳಲೇಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement