ಬೆಳಕು - ಕತ್ತಲು
ಬೆಳಕು - ಕತ್ತಲು
ಬೆಳಕಿನಲ್ಲೂ ನೆರಳಿನ ಕತ್ತಲೆಯುಂಟು. ಕತ್ತಲೆಯಲ್ಲೂ ಚೈತನ್ಯದ ಬೆಳಕುಂಟು
ಬೆಳಕು- ಕತ್ತಲೆ ವಿರೋಧಿಯಲ್ಲ. ಚೈತನ್ಯದ ಹಿಂಬಾಲಕರು
ಬೆಳಕಿನ ಅಭಾವ ಕತ್ತಲೆಯೋ ಅಥವಾ ಕತ್ತಲೆಯ ಅಭಾವ ಬೆಳಕೋ?
ಬೆಳಕು ಮತ್ತು ಕತ್ತಲು ಎರಡೂ ಅಭಾವಗಳಲ್ಲ. ಎರಡೂ ಭವದಲ್ಲಿನ ಭಾವಗಳೇ.
ಕತ್ತಲೆ ಬೆಳಕಿನ ಹಿಕ್ಮತ್ತು. ಬೆಳಕು ಕತ್ತಲೆಯ ಔದಾರ್ಯ
ಬೆಳಕು ಕೊಳಕಿನ ಪೊರಕೆ. ಕತ್ತಲು ಅದರ ಹೊದಿಕೆ
ಕತ್ತೆತ್ತಿ ನೋಡಿದರತ್ತತ್ತ ಕತ್ತಲು. ಅದು ನಿಶಾದೇವಿಯ ಕೃಪೆ
ಸಾವಿರಾರು ಕತೆಗಳ ಭ್ರೂಣ ಈ ಕತ್ತಲು
ಕತ್ತಲೆಂದರೆ ಸಾವಲ್ಲ. ಅದು ಹುಟ್ಟಿನ ಗರ್ಭಕೋಶ
ಬೆಳಕನ್ನು ಹುಟ್ಟಿಸಬಹುದು, ಅದು ಸಾದಿ. ಕತ್ತಲೆ ಹುಟ್ಟಿಸಲಾಗದ ಅಜನ್ಯ, ಅದು ಅನಾದಿ
ಬೆಳಕೆಂದರೆ ಶಬ್ದ. ಕತ್ತಲು ಶಬ್ದ ಮೀರಿದ ಮೌನ
ಬೆಳಕು ವಾಚ್ಯ, ಕತ್ತಲು ಅನಿರ್ವಾಚ್ಯ
ಬೆಳಕೆಂದರೆ ಆರತಿ. ಕತ್ತಲೆಯೆಂದರೆ ರತಿ
ಬೆಳಕು ಆರಬಹುದು. ಅದು ಸಾಂತ. ಕತ್ತಲು ಆರುವುದಿಲ್ಲ. ಅದು ಅನಂತ
ಬೆಳಕು ವಿರಮಿಸುತ್ತದೆ. ಆಗ ಕತ್ತಲು ರಮಿಸುತ್ತದೆ
ವಿಶ್ವನಾಥ ಸುಂಕಸಾಳ
vishwasunkasal@yahoo.com
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.