ಖರ್ಚಾಗದೇ ಹಾಗೆಯೇ ಉಳಿಯುವ ವಸ್ತು ಯಾವುದು?
ಬೋ.ಪಾ. ವೆಂಕಟೇಶ, ಹೊಸಕೋಟೆ, 9964862720
ಖರ್ಚಾಗದೇ ಹಾಗೆಯೇ ಉಳಿಯುವ ವಸ್ತು ಯಾವುದು?
ಹೊಟ್ಟೆ ಸುತ್ತ ಬೆಳೆದ ಕೊಬ್ಬು!
ಹರಳಹಳ್ಳಿ ಪುಟ್ಟರಾಜು, ಪಾಂಡವಪುರ
ಹನಿ ಹನಿ ಕೂಡಿದರೆ ಹಳ್ಳ. ತನುಮನ ಕೂಡಿದರೆ?
ಛೀ ಕಳ್ಳ!
ಮೊಗ್ಗಳ್ಳಿ ಗುರು, ಬನವಾಸಿ, 9480931442
ಮದುವೆ ಮಂಟಪಗಳಲ್ಲಿ ಬ್ರಹ್ಮಚಾರಿಗಳಿಗೇನು ಕೆಲಸ?
ಬ್ರಹ್ಮಚರ್ಯ ಕಳೆದುಕೊಳ್ಳಲು ಸೂಕ್ತ ಜನರಿಗಾಗಿ ಹುಡುಕಾಟ!
ಕೆ.ಎನ್. ನಾರಾಯಣ ರೆಡ್ಡಿ, ಕೆ.ಜೆ.ಎಫ್
ಮೊಮಕ್ಕಳಿಗೆ ಕತೆ ಹೇಳಿ ಮಲಗಿಸುತ್ತಿದ್ದ ಅಜ್ಜಿಯರೆಲ್ಲಾ ಈಗೆಲ್ಲಿ?
ಟಿ.ವಿ. ಸೀರಿಯಲ್ ನೋಡೋದರಲ್ಲಿ ಬ್ಯುಸಿ ಆಗಿದ್ದಾರೆ!
ಸಿ. ನಾಗರಾಜ್ ಅರದೋಟ್ಲು, ಭದ್ರಾವತಿ
ಪಕ್ಕದ ಮನೆಯಿಂದ ನೈವೇದ್ಯ ಬರುತ್ತದೆಂದು ಕಾಯುತ್ತಾ ಕೂರುವುದು ಸರೀನಾ?
ಅವರೂ ಹಾಗೇ ಯೋಚಿಸಿದರೆ, ದಿನವೂ ಏಕಾದಶಿ!
-ಬಾಣಭಟ್ಟ