ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ರೈಲು ಬಂತು ಚಿಕ್ಕಮಗಳೂರಿಗೆ

Srinivasa Murthy VN
Updated On : 20 Nov 2013, 11:18 am

ಹಳೆಯ ಮೈಸೂರು ಸಂಸ್ಥಾನದಲ್ಲಿ ರೈಲ್ವೆ ಸಂಪರ್ಕ ಇಲ್ಲದೇ ಇದ್ದ ಏಕಮಾತ್ರ ಜಿಲ್ಲಾ ಮುಖ್ಯಸ್ಥಳ ಚಿಕ್ಕಮಗಳೂರು. ಕಾಫಿ ನಾಡಿನ ಹೃದಯದಂತಿರುವ ಈ ಊರಿಗೆ ಕಡೂರಿನಿಂದ ರೈಲು ಸಂಪರ್ಕ ಕಲ್ಪಿಸಿಕೊಡಬೇಕೆನ್ನುವ ಬೇಡಿಕೆ ಬಹಳ ಹಳೆಯದು.
ಅಂದಿನಿಂದಲೂ, ಈ ಭಾಗದ ಜನ ತಮ್ಮ ಕನಸಿನ ರೈಲ್ವೆ ಸಂಪರ್ಕಕ್ಕೆ ಅವಕಾಶ ಸಿಕ್ಕಾಗಲೆಲ್ಲ ಒತ್ತಾಯ ಪಡಿಸುತ್ತಲೇ ಇದ್ದರು. ಕೆಲವು ಬಾರಿ ಇನ್ನೇನು ಕೆಲಸ ಆರಂಭವಾಗಬೇಕು ಎನ್ನುವ ಸಮಯದಲ್ಲಿ ಒಂದಲ್ಲ ಒಂದು ತಡೆ ಬಂದಿತ್ತು. ಕೊನೆಗೆ 1978ರಲ್ಲಿ ಇಂದಿರಾ ಗಾಂಧಿ ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದ ಮರುಚುನಾವಣೆಯಲ್ಲಿ ಗೆದ್ದಾಗ, ಅವರು ಆ ಊರಿಗೆ ರೈಲು ಸಂಪರ್ಕದ ಯೋಜನೆಗೆ ಮತ್ತೆ ಚಾಲನೆ ನೀಡಿದರು. ಕೊನೆಗೂ ಮಂಗಳವಾರ ಚಿಕ್ಕಮಗಳೂರಿನಲ್ಲಿ ರೈಲ್ವೆಮಂತ್ರಿ ಮಲ್ಲಿಕಾರ್ಜುನ ಖರ್ಗೆ ಅವರು ಚಿಕ್ಕಮಗಳೂರು-ಕಡೂರು-ಶಿವಮೊಗ್ಗ ಪ್ಯಾಸೆಂಜರ್‌ಗೆ ಹಸಿರು ಬಾವುಟವನ್ನು ತೋರಿಸಿದಾಗ ಈ ಭಾಗದ ಜನರ ಶತಮಾನಕ್ಕೂ ಹೆಚ್ಚಿನ ಅವಧಿಯ ಕನಸು ಈಡೇರಿತು. ಗ ಈ ಭಾಗದ ಜನರಿಗೆ ಚಿಕ್ಕಮಗಳೂರಿನಿಂದ ನೇರವಾಗಿ ಕಡೂರು ಮಾರ್ಗವಾಗಿ ಬೆಂಗಳೂರು-ಮುಂಬೈಗಳ ರೈಲು ಯಾತ್ರೆ ಸಾಧ್ಯ. ಈ ರೈಲ್ವೆ ಮಾರ್ಗ ಮಲೆನಾಡಿನ ಗರ್ಭದ ಸೀಮೆಯ ಘಟ್ಟಗಳಿಂದ ಇಳಿದು ಮೈದಾನ ಸೀಮೆಯನ್ನು ಪ್ರವೇಶಿಸುವಂತೆ ಆಗಿದ್ದು ಒಂದು ದೊಡ್ಡ ಸಾಧನೆಯೇ. ಈ ಭಾಗದ ಅಭಿವೃದ್ಧಿಗೆ ರೈಲು ಮಾರ್ಗವನ್ನು ಸರಿಯಾಗಿ ಬಳಸಿಕೊಳ್ಳುವುದು ಈಗ ಸರ್ಕಾರದ ಕರ್ತವ್ಯ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement